Kannada NewsKarnataka News

29ರಿಂದ ಚನ್ನಮ್ಮ ನಗರದಲ್ಲಿ ದಾಂಡಿಯಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ನವರಾತ್ರಿ ಎಂದರೆ ಬೆಳಗಾವಿಯಲ್ಲಿ ದಾಂಡಿಯಾ ನೃತ್ಯ ಪ್ರಸಿದ್ಧ. ನಗರದ 7-8 ಕಡೆಗಳಲ್ಲಿ ದಾಂಡಿಯಾ ನೃತ್ಯ ಆಯೋಜಿಸಲಾಗುತ್ತದೆ. ಸಂಜೆ ಆರಂಭವಾಗುವ ದಾಂಡಿ ಕೆಲವಡೆ ಮಧ್ಯ ರಾತ್ರಿಯವರೆಗೂ ನಡೆಯುತ್ತವೆ.

ಶಾಸಕ ಅಭಯ ಪಾಟೀಲ ಪ್ರತಿವರ್ಷ ದಾಂಡಿಯಾ ನೃತ್ಯ ಆಯೋಜಿಸುತ್ತಾರೆ. ರಾಣಿ ಚನ್ನಮ್ಮ ನಗರದ ಮೈದಾನದಲ್ಲಿ ರಾತ್ರಿ 7 ಗಂಟೆಯಿಂದ 10 ಗಂಟೆಯವರೆಗೆ ಪ್ರತಿದಿನ ದಾಂಡಿಯಾ ನಡೆಯಲಿದೆ. ಸೆ.29ರಂದು ಆರಂಭವಾಗುವ ದಾಂಡಿಯಾ ಅ.7ರವಗೊ ನಡೆಯುವುದು.

ನಗರದ ವಿವಿಧೆಡೆಯ ಯುವಕ, ಯುವತಿಯರು, ಮಕ್ಕಳು ದಾಂಡಿಯಾ ಆಡಿ ಖುಷಿಪಡಲಿದ್ದಾರೆ. ನಿತ್ಯವೂ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button