*ಪಾಲಿಕೆಗೆ 20 ಕೋಟಿ ದಂಡ ಉಳಿಸಲು ಅವಕಾಶ ಇದ್ದರೆ ನೋಡುತ್ತೇವೆ: ರಾಜು ಸೇಠ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಸಿ ಅಕೌಂಟಗೆ ಹಣ ತುಂಬೋದ ಇದೆ. ಕಾನೂನಿನ ಪ್ರಕಾರ ಏನಾದರೂ ಅವಕಾಶ ಇದೆಯಾ ಎಂದು ನೋಡುತ್ತಿದ್ದೇವೆ. ಜಿಲ್ಲಾಧಿಕಾರಿ, ಕಮಿಷನರ್, ನಾವೂ ಕೂಡಿ ಲೀಗಲಿ ಏನ ಮಾಡಬೇಕು ಅಂತಾ ನೋಡುತ್ತಿದ್ದೇವೆ ಎಂದು ಬೆಳಗಾವಿಯಲ್ಲಿ ಮಹಾನಗರ ಪಾಲಿಕೆಗೆ 20 ಕೋಟಿ ತಲೆದಂಡ ವಿಚಾರವಾಗಿ ಶಾಸಕ ರಾಜು ಸೇಠ್ ಹೇಳಿಕೆ ನೀಡಿದ್ದಾರೆ.
ಮಾದ್ಯಮಗಳ ಜೊತೆ ಮಾತನಾಡಿದ ಅವರು, ಯಾರೋ ಒಬ್ಬರೂ ತಪ್ಪು ಮಾಡಿದ್ದರಿಂದ ಸಾರ್ವಜನಿಕರ ತೆರಿಗೆ ಹಣ ಕಟ್ಟುವಂತಾಗಿದೆ. ಆದರೆ ಯಾರೋ ಒಬ್ಬರು ಇಲ್ಲಾ ಬಹಳ ಜನ ನಾನು ಹೇಳುವುದಿಲ್ಲಾ. ಭೂ ಸ್ವಾಧೀನ ಮಾಡದೆ ಹಾಗೇ ರಸ್ತೆ ನಿರ್ಮಾಣ ಮಾಡಿದ್ದರಿಂದ ನಮಗೆ ತೊಂದರೆ ಆಗಿದೆ. ಇದರಲ್ಲಿ ಯಾರೇ ಭಾಗಿ ಇದ್ದಾರೂ ಆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಅಂತಾ ಹೇಳಿದೇನಿ. ನಾನು ಇರಲಿ, ಸಚಿವರೆ ಇರಲಿ ಕಾನೂನಿನ ಪ್ರಕಾರ ಕೆಲಸ ಮಾಡಬೇಕು. ಕಾನೂನು ಬಿಟ್ಟು ನಾವು ಕೆಲಸ ಮಾಡಬಾರದು. ಹೈಕೋರ್ಟ್ ಆದೇಶ ಆಗಿದೆ. ಹಣ ತುಂಬಲು ಕಾನೂನಿನ ಮೂಲಕ ಪಾಲಿಕೆ ದಂಡ ಉಳಿಸಲು ಅವಕಾಶ ಇದ್ದರೆ ನೋಡುತ್ತೇವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ