ಪ್ರಗತಿವಾಹಿನಿ ಸುದ್ದಿ: ನಲ್ ಜಲ್ ಮಿತ್ರ ಯೋಜನೆ ಅನುಷ್ಠಾನ ಸಂಬಂಧ 48 ಜನ ಮಹಿಳೆಯರಿಗೆ ನೀಡಲಾಗುತ್ತಿರುವ ಕೌಶಲ್ಯ ಆಧಾರಿತ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಜಿ.ಪಂ. ಸಿಇಒ ತರಬೇತಿ ಕುರಿತು ಪರಿಶೀಲನೆ ನಡೆಸಿದರು.
ನಗರದ ಜಿ.ಟಿ.ಟಿ.ಸಿ. ತರಬೇತಿ ಕೇಂದ್ರದಲ್ಲಿ ದಿನಾಂಕ 19-08-2024 ರಿಂದ 10-09-2024 ರ 17 ದಿನದ ವರೆಗೆ ನಡೆಯುತ್ತಿರುವ ತರಬೇತಿದಾರರ ಜೊತೆ ಸಂವಾದ ನಡೆಸಿದರು ಮತ್ತು ತರಬೇತಿದಾರರಿಂದ ಪಡೆಯುತ್ತಿರುವ ತರಬೇತಿಯ ಅನುಭವಗಳನ್ನು ಆಲಿಸಿ ತರಬೇತಿದಾರರಿಗೆ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು.
ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಸಹಕಾರದೊಂದಿಗೆ ನಲ್ ಜಲ್ ಮಿತ್ರ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಾರ್ಯಕ್ರಮದಡಿ ಬಹು ಕೌಶಲ್ಯ ತರಬೇತಿಯಡಿ ಕೊಳಾಯಿ, ವಿದ್ಯುತ್ ಕೆಲಸ, ಕಲ್ಲುಮಣ್ಣು ಕೆಲಸ, ಉಪಕರಣ ಮತ್ತು ಯಂತ್ರೋಪಕರಣ ರಿಪೇರಿ ಕೆಲಸಗಳ ಬಹುಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಸಕ್ಷಮ ಕೌಶಲ್ಯದಾರರಾಗಬೇಕೆಂದು ಈ ಸಂದರ್ಭದಲ್ಲಿ ತರಬೇತುದಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಬೆಳಗಾವಿ ವಿಭಾಗ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ಶಶಿಕಾಂತ ನಾಯಿಕ ಹಾಗೂ ಎನ್.ಆರ್.ಎಲ್.ಎಮ್. ಸಿಬ್ಬಂದಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ