Karnataka News

*ಮುಂದಿನ‌ ಮೂರು ದಿನ ಭಾರಿ ಮಳೆ: ಯೆಲ್ಲೋ ಅಲರ್ಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉಳಿದಂತೆ ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ ಕೋಲಾರ,ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಲಿದೆ.

Home add -Advt

ವಾಯುಭಾರ ಕುಸಿತದಿಂದ ಕೆಲ ದಿನಗಳಿಂದ ವರುಣನ ಆರ್ಭಟ ಶುರುವಾಗಿದ್ದು, ಉಡುಪಿ, ಕಾರ್ಕಳ, ಶಾಹಪುರ, ಕಮ್ಮರಡಿ, ಕೊಪ್ಪ ಎನ್‌ಆರ್‌ಪುರ, ಗೋಕರ್ಣ, ಹೊನ್ನಾವರ, ಧಾರವಾಡ, ಕುಂದಗೋಳ, ಕುರ್ಡಿ, ಕೂಡಲಸಂಗಮ, ಹುಬ್ಬಳ್ಳಿ, ಮಾನ್ವಿ ಕೂಡಲಸಂಗಮ, ಜಯಪುರ, ಕೊಟ್ಟಿಗೆಹಾರ, ಕಳಸದಲ್ಲಿ ಮಳೆಯಾಗಿದೆ.

ಹಾಗೆಯೇ ಕ್ಯಾಸಲ್‌ರಾಕ್, ಬೀದರ್, ಭಾಲ್ಕಿ, ಆಗುಂಬೆ, ಗಟ್ಟೂರು, ರಾಯಚೂರು, ಶೋರಾಪುರ, ಗೇರುಸೊಪ್ಪ ಲೋಂಡಾ, ಮುನ್ನಳ್ಳಿ, ಸಿದ್ದಾಪುರ, ಧರ್ಮಸ್ಥಳ, ಕಲಘಟಗಿ, ಕವಡಿಮಟ್ಟಿ, ದೇವದುರ್ಗ, ದೇವರಹಿಪ್ಪರಗಿ, ಔರಾದ್, ಸಿಂಧನೂರು, ಶೃಂಗೇರಿ, ಮಂಕಿ, ಕದ್ರಾ, ಬೆಳ್ತಂಗಡಿ, ಹಳಿಯಾಳದಲ್ಲಿ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Related Articles

Back to top button