ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಮತ್ತೆ ಮುಂಡೂಡಿದೆ.
ಇಂದು ವಾದ-ಪ್ರತಿವಾದ ಆಲಿಸಿದ ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಸೆ.12ರಂದು ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಮತ್ತೊಂದು ಸುತ್ತಿನ ವಾದ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೆ.12ರವರೆಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಕೋರ್ಟ್ ಕಲಾಪದ ಅಂಶಗಳು:
ದೂರುದಾರರು ಪೊಲೀಸರು ದೂರು ನೀಡಿದ ಮೇಲೆ ನಿರ್ದಿಷ್ಟ ಸಮಯ ನೀಡಿಲ್ಲ- ಎಜಿ
ಡಾ.ಅಶೋಕ್ ಪ್ರಕರಣ ಉಲ್ಲೇಖಿಸಿ ಎಜಿ ವಾದ
ಪಿಸಿ ಆ್ಯಕ್ 17a ಅಡಿ ಬಗ್ಗೆ ಮಾಹಿತಿ ನೀಡುತ್ತಿರುವ ಎಜಿ
ಸ್ಯಾಕ್ಷನ್ ಪಡೆಯಲು ನಿರ್ದಿಷ್ಟ ಅಧಿಕಾರಿಯ ಶಿಫಾರಸು ಮುಖ್ಯ..
ಈ ಡಾ.ಅಶೋಕ್ ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ..
ದೂರು ನೀಡಿದ ಮೇಲೆ ನಿರ್ದಿಷ್ಟ ಸಮಯ ನೀಡದೇ ರಾಜ್ಯಪಾಲರಿಗೆ ದೂರು ನೀಡಲಾಗಿದೆ- ಎಜಿ
ಪೊಲೀಸ್ ಅಧಿಕಾರಿಗೆ ದೂರು ನೀಡಿದ ಬಳಿ ಸಮಯ ನೀಡಿಲ್ಳ
ತರಾತುರಿಯಲ್ಲಿ ರಾಜ್ಯಪಾಲರಿಗೆ ದೂರು ಸ್ಯಾಂಕ್ಷನ್ ಕೇಳಿದ್ದಾರೆ
ಇಲ್ಲಿ ಆರೋಪ ಎರಡು ವಿಚಾರ ಗಮನಿಸಬೇಕು
ಅಪರಾಧ ಕ್ಕೆ ಸಂಬಂಧಿಸಿದಂತೆ ನಿರ್ಧಿಷ್ಟವಾದ ದಾಖಲೆಗಳನ್ನ ಒದಗಿಸಬೇಕು..
ಸಿದ್ದರಾಮಯ್ಯ ತಪ್ಫು ಮಾಡಿದ್ದಾರೆ ಎಂಬುದಕ್ಕೆ ಸರಿಯಾದ ದಾಖಲೆಗಳಿಲ್ಲ..
——+
ಚಂದ್ರಬಾಬು ನಾಯ್ಡು ಪ್ರಕರಣ ಉಲ್ಲೇಖಿಸಿ ವಾದ..
ಯಡಿಯೂರಪ್ಪ ಪ್ರಕರಣದ ಉಲ್ಲೇಖಿಸಿ ಎಜಿ ವಾದ..
ಸಿದ್ದರಾಮಯ್ಯ ಯಾವುದೇ ಶಿಫಾರಸು ಮಾಡಿಲ್ಲ
ಸಿದ್ದರಾಮಯ್ಯ ಯಾವುದೇ ನಿರ್ಧಾರ ಮಾಡಿಲ್ಲ – ಎಜಿ
17 ಎ ಅಡಿಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ರೂಪಿಸಿದೆ
ಖಾಸಗಿ ದೂರುದಾರರನ್ನು ಪೊಲೀಸರಿಗೆ ಮೇಲ್ತಸ್ತರದಲ್ಲಿ ಇಡಲಾಗದು
ತನಿಖಾಧಿಕಾರಿ ತನಗೆ ಬರುವ ಮಾಹಿತಿ ಪರಿಶೀಲಿಸುತ್ತಾನೆ
ಆದರೆ ಖಾಸಗಿ ದೂರುದಾರರ ವಿಷಯದಲ್ಲಿ ಹೀಗಾಗುವುದಿಲ್ಲ-ಎಜಿ
ಯಾವ ಕೇಸ್ ನಲ್ಲಿ ಪ್ರಾಥಮಿಕ ತನಿಖೆ ಬೇಕೆಂಬುದನ್ನು ಸುಪ್ರೀಂಕೋರ್ಟ್ ಹೇಳಿದೆ
ಇದು 22 ವರ್ಷಕ್ಕಿಂತ ಹಳೆಯ ಕೇಸ್ ಆಗಿರುವುದರಿಂದ ಪ್ರಾಥಮಿಕ ತನಿಖೆ ಬೇಕು. – ಎಜಿ
ಇದು ಪೊಲೀಸ್ ಅಧಿಕಾರಿಯ ಮುಂದೆ ದೂರು ಕೊಟ್ಟಾಗ
ಆದರೆ ಖಾಸಗಿ ದೂರುದಾರರಿಗೆ ಇದು ಅನ್ವಯವಾಗುವುದಿಲ್ಲ – ಜಡ್ಜ್
ಪೊಲೀಸರಿಗೆ ದೂರು ನೀಡಿದ ನಂತರ 15 ದಿನಗಳಿಂದ 6 ವಾರ ಕಾಲಾವಕಾಶ ಇದೆ-ಎಜಿ
ಆದರೆ ಅದಕ್ಕೆ ಕಾಯದೇ ರಾಜ್ಯಪಾಲರಿಗೆ ದೂರು ನೀಡಲಾಗಿದೆ- ಎಜಿ
ಸಿಎಂ ಕೈಗೊಂಡ ನಿರ್ಧಾರ, ಶಿಫಾರಸಿನಲ್ಲಿ ಅಪರಾಧದ ಅಂಶವಿರಬೇಕು
17 ಎ ಅಡಿ ಅನುಮತಿ ನೀಡುವಾಗ ಕೃತ್ಯ ಕರ್ತವ್ಯದ ಭಾಗವಾಗಿತ್ತೇ ನೋಡಬೇಕು
ನಾರಾ ಚಂದ್ರಬಾಬು ನಾಯ್ಡು ವರ್ಸಸ್ ಆಂಧ್ರಪ್ರದೇಶ ಕೇಸ್ ಉಲ್ಲೇಖ
ಬಿ.ಎಸ್. ಯಡಿಯೂರಪ್ಪ ಪ್ರಕರಣ ಉಲ್ಲೇಖಿಸಿ ಎಜಿ ವಾದ
ಡಿನೋಟಿಫಿಕೇಷನ್ ಕೇಸ್ ನಲ್ಲಿ ಸಿಎಂ ಬಿಎಸ್ವೈ ತೀರ್ಮಾನ ಕೈಗೊಂಡಿದ್ದರು
ಆದರೆ ಈ ಕೇಸಿನಲ್ಲಿ ಸಿದ್ದರಾಮಯ್ಯ ತೀರ್ಮಾನ ಕೈಗೊಂಡಿಲ್ಲ- ಎಜಿ
ಎಲ್ಲ ನಾಗರಿಕರು ಎಲ್ಲರ ವಿರುದ್ಧ ದೂರು ನೀಡಿದರೆ ಸಮಸ್ಯೆ ಆಗಲಿದೆ – ಎಜಿ
ಹೀಗಾಗಿಯೇ ಡಾ.ಅಶೋಕ್ ಕೇಸ್ ನಲ್ಲಿ ಮಾರ್ಗಸೂಚಿ ರೂಪಿಸಲಾಗಿದೆ- ಜಡ್ಜ್
ರಾಜ್ಯಪಾಲರು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು
ಸರ್ಕಾರಕ್ಕೆ ಷೋಕಾಸ್ ನೋಟಿಸ್ ನೀಡುವ ಬದಲು ವರದಿ ಪಡೆಯಬೇಕಿತ್ತು
ವರದಿಯ ಬಲವಿಲ್ಲದೇ ರಾಜ್ಯಪಾಲರು ಅನುಮತಿ ನೀಡಿದ್ದಾರೆ
ಕೇಂದ್ರ ಸರ್ಕಾರದ 17ಎ ಮಾರ್ಗಸೂಚಿ ಆಧರಿಸಿ ಎಜಿ ವಾದಮಂಡನೆ
ಸಿಎಂ ಕರ್ತವ್ಯದ ಭಾಗವಾಗಿ ಈ ಕೃತ್ಯ ನಡೆದಿಲ್ಲ.-ಎಜಿ
ಇದಕ್ಕೆ ಅವಕಾಶ ಕೊಟ್ಟರೆ ದಿನನಿತ್ಯ ಹಲವು ಖಾಸಗಿ ದೂರು ದಾಖಲಾಗಬಹುದು
ಸಕ್ಷಮ ಪ್ರಾಧಿಕಾರಿಯೇ ಇದನ್ನೆಲ್ಲಾ ವಿಚಾರಣೆ ನಡೆಸಿದರೆ ಸಮಸ್ಯೆ ಆಗಲಿದೆ
ಪೊಲೀಸ್ ಅಧಿಕಾರಿಯ ಮೂಲಕವೇ 17ಎ ಅಡಿ ಅನುಮತಿ ಪಡೆಯಬೇಕು
ಸಚಿವ ಸಂಪುಟದ ನಿರ್ಧಾರವನ್ನು ತಿರಸ್ಕರಿಸುವ ಅನಿಯಂತ್ರಿತ ಅಧಿಕಾರವಿಲ್ಲ
ರಾಜ್ಯಪಾಲರ ಆದೇಶದಲ್ಲಿ ಇದಕ್ಕೆ ಕಾರಣಗಳಿರಬೇಕು
ರಾಜ್ಯಪಾಲರು ಪರಿಶೀಲಿಸಿದ ಕಡತದಲ್ಲಲ್ಲ-ಎಜಿ ಶಶಿಕಿರಣ್ ಶೆಟ್ಟಿ
ಸ್ನೇಹಮಯಿ ಕೃಷ್ಣ ಮನವಿಯಲ್ಲಿ ಸಿಬಿಐ ತನಿಖೆ ಕೋರಲಾಗಿದೆ.
ರಾಜ್ಯಪಾಲರ ಆದೇಶ 17ಎ ಅಡಿ ಇರಬೇಕೇ ಹೊರತು ಅವರ ಫೈಲ್ ನೋಟಿಂಗ್ ಗಳಲ್ಲ
ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡನೆ ಅಂತ್ಯ
ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು, ರಾಜ್ಯಪಾಲರಲ್ಲ – ಎಜಿ.
ರಾಜ್ಯಪಾಲರು ಅನುಸರಿಸಿದ ಪ್ರಕ್ರಿಯೆಗೆ ಕಾನೂನಿನಡಿ ಅವಕಾಶವಿಲ್ಲ
ರಾಜ್ಯಪಾಲರು ಖಾಸಗಿ ದೂರುದಾರರಿಗೆ ಅವಕಾಶವನ್ನೇ ನೀಡಬಾರದಿತ್ತು
ದೂರುದಾರ ಪ್ರದೀಪ್ ಕುಮಾರ್ ಪೊಲೀಸರಿಗೆ ದೂರನ್ನೇ ನೀಡಿರಲಿಲ್ಲ
ಖಾಸಗಿ ದೂರುದಾರರ ಮನವಿಯನ್ನು ರಾಜ್ಯಪಾಲರು ಹಿಂತಿರುಗಿಸಬೇಕಿತ್ತು
3 ವಾಲ್ಯೂಮ್ ಗಳ ದಾಖಲೆಗಳನ್ನು ರಾಜ್ಯಪಾಲರ ಪರ ವಕೀಲರು ನೀಡಿದ್ದಾರೆ
ಆದರೆ ಷೋಕಾಸ್ ನೋಟಿಸ್ ನೀಡುವ ಮುನ್ನ ಪ್ರಾಥಮಿಕ ವರದಿ ಇಲ್ಲ.
17 ಎ ಅಡಿ ರಾಜ್ಯಪಾಲರೇ ಪ್ರಾಥಮಿಕ ತನಿಖೆ ನಡೆಸುವಂತಿಲ್ಲ – ಎಜಿ
ತನಿಖಾಧಿಕಾರಿಯಂತೆ ರಾಜ್ಯಪಾಲರು ವರ್ತಿಸುವಂತಿಲ್ಲ – ಎಜಿ
ಪೊಲೀಸರು ಎಫ್ಐಆರ್ ದಾಖಲಿಸುವ ಮುನ್ನ 17ಎ ಅನುಮತಿ ಪಡೆಯಬೇಕು- ಜಡ್ಜ್.
ಕೋರ್ಟ್ ಸೂಚಿಸಿದ್ದರೆ ಎಫ್ಐಆರ್ ದಾಖಲಾಗುತ್ತಿತ್ತು -ಜಡ್ಜ್
ಇದನ್ನು ತಡೆಯಲು ಖಾಸಗಿ ದೂರುದಾರರಿಗೆ ಅನುಮತಿ ಪಡೆಯುವ ಅವಕಾಶ ನೀಡಲಾಗಿದೆ.- ಜಡ್ಜ್
ಸಿಎಂ ಪರವಾಗಿ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಲು ಅವಕಾಶ ಮನವಿ
ಅಭಿಷೇಕ್ ಮನು ಸಿಂಘ್ವಿ ವಾದದ ಬಳಿಕ ಅವಕಾಶಕ್ಕೆ ಮನವಿ..
ಎಷ್ಟು ಜನ, ಎಷ್ಟೂ ಅಂತ ವಾದ ಮಂಡಿಸ್ತೀರಿ…
ಈಗಾಗಲೇ ಸಾಕಷ್ಟು ವಾದ ಆಲಿಸಲಾಗಿದೆ – ಜಡ್ಜ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ