*ಹಿರಿಯರಲ್ಲಿ ಕಂಡುಬರುವ ಸಮಸ್ಯೆ ಹೋಗಲಾಡಿಸಲು ವೈದ್ಯರು ಸರಿಯಾದ ಚಿಕಿತ್ಸೆ ನೀಡಬೇಕು: ಡಾ. ಮಹಾಂತಶೆಟ್ಟಿ*
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಅಸಮತೋಲನ ಹೊಂದಿರುವವರ ಜನಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. 60 ವರ್ಷಗಳ ನಂತರ ಇದು ಸಾಮಾನ್ಯವಾಗಿದ್ದು, ಕೆಲವು ಸಲ ಸುರಕ್ಷಿತವಾಗಿ ನಡೆಯಲು ಬೇರೊಬ್ಬರನ್ನು ಆಶ್ರಯಿಸಬೇಕಾಗುತ್ತದೆ. ಆದ್ದರಿಂದ ಹಿರಿಯರಲ್ಲಿ ಕಂಡುಬರುವ ಈ ಸಮಸ್ಯೆಯನ್ನು ಹೋಗಲಾಡಿಸಲು ವೈದ್ಯರು ಸರಿಯಾದ ಚಿಕಿತ್ಸೆ ನೀಡುವದರೊಂದಿಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಸಮತೋಲನ ಬಹಳ ಮುಖ್ಯ. ತಲೆ ತಿರುಗುವಿಕೆಯಿಂದ ಯಾವುದೇ ಕಾರ್ಯ ಮಾಡಲು ಅಸಾಧ್ಯ. ಹಿರಿಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಅವರ ಆರೈಕೆ ಸರಿಯಾದ ಕ್ರಮದಲ್ಲಿ ಮಾಡಬೇಕಾಗಿದೆ ಎಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರಿಂದಿಲ್ಲಿ ಹೇಳಿದರು.
ಕಾಹೆರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕಿವಿ, ಮೂಗು, ಗಂಟಲು ವಿಭಾಗವು ದಿ. 18 ಸೆಪ್ಟಂಬರ 2024 ರಂದು ಏರ್ಪಡಿಸಲಾಗಿದ್ದ ಅಸಮತೋಲನ ಅರಿವು ಕಾರ್ಯಕ್ರಮ, ಅಡವಾನ್ಸ ವೆಸ್ಟಿಬುಲರ ಡಿಸಾರ್ಡರ ಕುರಿತ ಮುಂದುವರೆದ ವೈದ್ಯಕೀಯ ಶಿಕ್ಷಣ ಕರ್ಯಾಗಾರದಲ್ಲಿ ಮಾತನಾಡಿದ ಅವರು, ಚಿಕಿತ್ಸೆ ಪಡೆಯುತ್ತಿರುವ ರೋಗಿಯು ಹಿಂತಿರುಗಿ ಬರುತ್ತಲೇ ಇರುತ್ತಾನೆ ಮತ್ತು ಸ್ವಲ್ಪವೂ ಆರೋಗ್ಯವಾಗುತ್ತಿಲ್ಲ ಎಂದು ಹೇಳುತ್ತಾನೆ. ಆದ್ದರಿಂದ ಜೀವನಶೈಲಿ ಬದಲಾವಣೆ, ವ್ಯಾಯಾಮದಿಂದ ಖಂಡಿತವಾಗಿಯೂ ನಿಯಂತ್ರಿಸಿ, ತೊಂದರೆಗಳನ್ನು ನಿವಾರಿಸಬಹುದು. ಆದರೆ ವೈದ್ಯರಲ್ಲಿ ತಾಳ್ಮೆ ಮುಖ್ಯವಾಗಿರುತ್ತದೆ. ಹಿರಿಯ ನಾಗರೀಕರಲ್ಲಿ ಅಸಮತೋಲನ ಕಂಡು ಬಂದರೆ ಅವರನ್ನು ಮಗುವಂತೆ ಕಾಳಜಿವಹಿಸಬೇಕು. ಅಲ್ಲದೇ ಇದರ ಕುರಿತು ಜಾಗೃತಿ ಮೂಡಿಸಬೇಕು. ಆವಿಷ್ಕಾರಗಳ ಮೂಲಕ ವೈದ್ಯಕೀಯ ವಿಜ್ಞಾನ ಜೈವಿಕ ತಂತ್ರಜ್ಞಾನದ ಭವಿಷ್ಯವಾಗಿದೆ, ಇದು ಅತ್ಯವಶ್ಯವಾಗಿದ್ದು, ವೈದ್ಯಕೀಯ ಸಲಕರಣೆ ತಯಾರಿಸುವ ಎಂಜಿನಿಯರ್‌ಗಳು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತಾರೆ. ಸಮುದಾಯಕ್ಕೆ ಸಹಾಯ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ. ದಯಾನಂದ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯರಾದ ಡಾ. ರಾಜೇಶ ಪವಾರ, ಡಾ. ಶ್ರೀನಿವಾಸ ಬಿ ಆರ್, ಡಾ. ಎಂ ವಿ ಜಾಲಿ, ಡಾ. ರಾಜೇಶ ಪವಾರ, ಡಾ. ಹೆಚ್ ಬಿ ರಾಜಶೇಖರ, ಡಾ. ಆರಿಫ್ ಮಾಲ್ದಾರ, ಡಾ. ವಿನಿತಾ ಮೆಟಗುಡಮಠ ಉಪಸ್ಥಿರಿದ್ದರು. ಇಎನ್‌ಟಿ ವಿಭಾಗ ಮುಖ್ಯಸ್ಥರಾದ ಡಾ. ರಾಜೇಂದ್ರ ಮೆಟಗುಡಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ಅನಿಲ ಹಾರುಗೊಪ್ಪ ಡಾ. ಪ್ರೀತಿ ಹಜಾರೆ, ಡಾ. ನಿತಿನ ಅಂಕಲೆ, ಡಾ. ಪ್ರೀತಿ ಶೆಟ್ಟಿ, ಡಾ. ರಾಜೇಶ ಹವಾಲ್ದಾರ, ಡಾ. ವಿಶ್ವನಾಥ ಗೌಡಾ, ಡಾ. ಪ್ರಿಯಾಂಕಾ ಸಿಂಗ, ಡಾ. ತನುಭಾ ಗೋಯಲ್, ಡಾ. ಶಿಲ್ಪಾ ಮಲ್ಲಾಪೂರ, ಡಾ. ರಾಹುಲ್ ಗುಲಗಂಜಿ ಡಾ. ಸುಪ್ರಿತಾ ಸವದತ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ.ಪ್ರಶಾಂತ ಪಾಟೀಲ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ