Belagavi NewsBelgaum NewsKannada NewsKarnataka News

*ಗೋಕಾಕ್ ಬ್ಯಾಂಕ್ ನ ಅವ್ಯವಹಾರ ಪ್ರಕರಣ: 14 ಆರೋಪಿಗಳ ಆಸ್ತಿ ಸೀಜ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾಲಕ್ಷ್ಮೀ ಕೋ ಆಪ್ ರೇಟಿವ್ ಬ್ಯಾಂಕ್ ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ 14 ಜನರ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಹೇಳಿದರು.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗೋಕಾಕ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್‌ ಬ್ಯಾಂಕಿನಲ್ಲಿ 74.86 ಕೋಟಿ ಅವ್ಯವಹಾರ ನಡೆದಿರುವ ಕುರಿತು ಕಳೆದ ಒಂದು ವಾರದ ಹಿಂದೆ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕಣದಲ್ಲಿ ಒಟ್ಟು 14 ಜನರು ಭಾಗಿಯಾಗಿದ್ದು, 5 ಆರೋಪಿಗಳು ಈ ಬ್ಯಾಂಕಿನಲ್ಲೇ ಕಾರ್ಯನಿರ್ವಹಿಸುವ ಸಿಬ್ಬಂದಿಗಳಾಗಿದ್ದಾರೆ. ಅದರಲ್ಲಿ ಸಾಗರ ಹನಮಂತ ಸಬಕಾಳೆ ಎಂಬುವರೇ ಮುಖ್ಯ ಆರೋಪಿಯಾಗಿದ್ದಾನೆ. ಬ್ಯಾಂಕ್ ಅವ್ಯಹಾರದಲ್ಲಿ ಸಾಗರ ಎ1 ಆರೋಪಿಯಾಗಿದ್ದು, ಈತನ ಆಸ್ತಿ ಮೌಲ್ಯ 6.ಕೋಟಿ 97 ಲಕ್ಷ ಠೇವಣಿ ಇಟ್ಟು ಬೇರೆ ಬೇರೆಯವರ ಹೆಸರಿನಲ್ಲಿ 81 ಕೋಟಿ ರೂ. ಲೋನ್ ಪಡೆದಿರುತ್ತಾನೆ ಎಂದು ತಿಳಿಸಿದರು. 

ಬ್ಯಾಂಕಿನ ವಹಿವಾಟು ನಾಲ್ಕು ಬಾರಿ ಅಡಿಟ್ ಆಗಿದೆ. ಆದರೂ ಈ ಒಂದು ಅಂಶ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆಗೆ ನಮ್ಮ ಪೊಲೀಸರು 112 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ. ಇದರ ಸರಕಾರಿ ಮೌಲ್ಯ 13. ಕೋಟಿ 17 ಲಕ್ಷ ಇದೆ. ಮಾರ್ಕೆಟ್ ಮೌಲ್ಯ 50 ಕೋಟಿ ರೂ. ಇದೆ 11 ಆರೋಪಿಗಳು ಈ ಬ್ಯಾಂಕಿನಲ್ಲಿ ಆರು ಕೋಟಿ ಎಫ್ ಡಿ ಇಟ್ಟು ಬೇರೆ ಬೇರೆ ಅವರ ಹೆಸರಿನಲ್ಲಿ 2021 ರಿಂದ 2024ರ ಅವಧಿಯಲ್ಲಿ ಬ್ಯಾಂಕ್‌ ನಲ್ಲಿ 81 ಕೋಟಿ ಸಾಲ ಪಡೆದಿದ್ದಾರೆ ಎಂದರು.

ಗೋಕಾಕ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನಲ್ಲಿ ನಡೆದ ಅವ್ಯವಹಾರ ಪ್ರಕರಣ ಬೇದಿಸಲು ನಾವು ಕೂಡಾ 7 ತಂಡ ರಚನೆ ಮಾಡಲಾಗಿತ್ತು. ಸದ್ಯ ಬ್ಯಾಂಕಿನಲ್ಲಿ ಅವ್ಯವಹಾರ ಮಾಡಿದ 11 ಆರೋಪಿಗಳ ಬಂಧನಕ್ಕೆ ಈಗಾಗಲೇ ಬಲೆ ಬೀಸಲಾಗಿದೆ. ಬ್ಯಾಂಕಿನಲ್ಲಿ ಹಣ ಕಳೆದುಕೊಂಡ ಠೇವಣಿದಾರರಿಗೆ ಹಣ ಮರಳಿ ಕೊಡುವ ಕುರಿತು ಬ್ಯಾಂಕಿನ ಆಡಳಿತ ಮಂಡಳಿ ಅದನ್ನು ನೋಡಿಕೊಳ್ಳುತ್ತಾರೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button