Kannada NewsKarnataka NewsLatest

*ಆನ್ ಲೈನ್ ಬೆಟ್ಟಿಂಗ್ ಆಡಿ ಸಾಲದ ಸುಳಿಗೆ ಸಿಲುಕಿದ ಕಾಲೇಜು ವಿದ್ಯಾರ್ಥಿ: ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಕಾಲೇಜು ವಿದ್ಯಾರ್ಥಿಯೊಬ್ಬ ಆನ್ ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು, ಜೀವನವನ್ನೇ ಅಂತ್ಯಗೊಳಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

Home add -Advt

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚೌಡಯ್ಯನಗರದಲ್ಲಿ ಈ ದುರಂತ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಆಲ್ ಲೈನ್ ಬೆಟ್ಟಿಂಗ್ ಆಡುತ್ತಿದ್ದ. ಹಲವು ಬಾರಿ ಹಣ ಕಳೆದುಕೊಂಡಿದ್ದರೂ ಬುದ್ಧಿ ಕಲಿತಿರಲಿಲ್ಲ. ಎರಡು ಬಾರಿ ತಂದೆಯೇ ಸಾಲ ತೀರಿಸಿದ್ದರು.

ಮತ್ತೆ ಆನ್ ಲೈನ್ ಬೆಟ್ಟಿಂಗ್ ಆಡಬೇಡ ಎಂದು ಮಗನಿಗೆ ತಂದೆ ಬೈದು ಬುದ್ಧಿ ಹೇಳಿದ್ದರು. ತಂದೆ ಬೈದಿದ್ದಕ್ಕೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಮೇಶ್ ಬಂಟನೂರು (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.

ಮೃತ ರಮೇಶ್ ಜಮಖಂಡಿ ಖಾಸಗಿ ಕಾಲೇಜಿನಲ್ಲಿ ಬಿಸಿಎ ಪ್ರಥಮ ವರ್ಷದಲ್ಲಿ ಓದುತ್ತಿದ್ದ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಘಟನಾ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾರೆ.


Related Articles

Back to top button