ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿ 11,193 ಕೋಟಿ ರೂ. ಆದರೆ 2 ತಿಂಗಳಾದರೂ ಬಿಡುಗಡೆಯಾಗಿದ್ದು ಕೇವಲ 867 ಕೋಟಿ ರೂ.
ಇದು ಜಿಲ್ಲಾಡಳಿತವೇ ಬಿಡುಗಡೆ ಮಾಡಿರುವ ಅಧಿಕೃತ ಲೆಕ್ಕ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ಪ್ರವಾಹ ಪರಿಹಾರ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಲಾಗಿದೆ.
ಜಿಲ್ಲೆಯ ಒಟ್ಟೂ 872 ಗ್ರಾಮಗಳು ಪ್ರವಾಹದಿದ ಬಾಧಿತವಾಗಿವೆ. 2149.54 ಕೋಟಿ ರೂ. ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಮನೆಗಳಿಗೆ 2996.58 ಕೋಟಿ ರೂ. ಹಾನಿಯಾಗಿದೆ. 3229 ಕೋಟಿ ರೂ. ಬೆಳೆ ಹಾನಿಯಾಗಿದೆ. 9.29 ಕೋಟಿ ರೂ. ಜಾನುವಾರು ಹಾನಿಯಾಗಿದೆ. ಮನೆಗಳನ್ನು ಹೊರತುಪಡಿಸಿ 2808.54 ಕೋಟಿ ರೂ. ಖಾಸಗಿ ಆಸ್ತಿ ಹಾನಿಯಾಗಿದೆ.
1,12,483 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ. 1,08,268 ಆಹಾರ ಕಿಟ್ ಗಳನ್ನು ವಿತರಿಸಲಾಗಿದೆ. 69,381 ಮನೆಗಳು ಹಾನಿಗೊಳಗಾಗಿದ್ದು, 57,432 ಮನೆಗಳ ದಾಖಲೆ ಸರಿಯಾಗಿವೆ. 26,077 ಮನೆಗಳಿಗೆ 84.39 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 1160 ಜನರಿಗೆ ಶೆಡ್ ನಿರ್ಮಾಣಕ್ಕೆ 5.80 ಕೋಟಿ ರೂ. ನೀಡಲಾಗಿದೆ. 2551 ಜನರಿಗೆ ಮಾಸಿಕ 5 ಸಾವಿರ ರೂ.ಗಳಂತೆ 127.55 ಲಕ್ಷ ರೂ. ಬಾಡಿಗೆ ನೀಡಲಾಗಿದೆ.
32 ಜನರು ಸಾವಿಗೀಡಾಗಿದ್ದು, 28 ಜನರ ಕುಟುಂಬಗಳಿಗೆ 1.40 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 761 ಜಾನುವಾರ ಸಾವಿಗೀಡಾಗಿದ್ದು 71 ಲಕ್ಷ ರೂ. ವಿತರಿಸಲಾಗಿದೆ.2.21 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆ ಹಾನಿಯಾಗಿದೆ.
ವಾಸಕ್ಕೆ ಯೋಗ್ಯವಲ್ಲದ ಮನೆಗಳಿಗೂ 5 ಲಕ್ಷ ಪರಿಹಾರ
ಶಾಸಕರಿಂದ ದೂರು: ಜಿಲ್ಲಾಡಳಿತದ ಮೇಲೆ ಸಿಎಂ ಗರಂ
ಬೆಳಗಾವಿಗೆ ಆಗಮಿಸಿದ ಯಡಿಯೂರಪ್ಪ: ಸಧ್ಯಕ್ಕೆ ಜಿಲ್ಲೆ ವಿಭಜನೆ ಇಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ