Belagavi NewsBelgaum NewsEducationNational

*ಬಿಮ್ಸ್ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಬಿಮ್ಸ್ ವಿದ್ಯಾರ್ಥಿಗಳು ಬೆಂಗಳೂರಿನ ರಾಮಯ್ಯ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ನಡೆಸ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕರ್ನಾಟಕದಾದ್ಯಂತ ವಿವಿಧ ವೈದ್ಯಕೀಯ ಕಾಲೇಜುಗಳಿಂದ 65 ತಂಡಗಳು ಭಾಗಿಯಾಗಿದ್ದು, ಇದರಲ್ಲಿ ಬೆಳಗಾವಿಯ ಬಿಮ್ಸ್ ವಿದ್ಯಾರ್ಥಿಗಳು ಅಸ್ಕರ್ ಟ್ರೋಫಿಯನ್ನು ಗೆಲ್ಲುವದರ ಮೂಲಕ ತಮ್ಮ ಹೆಚ್ಚಿನ ಜ್ಞಾನ, ಕೌಶಲ್ಯ ಮತ್ತು ಅತ್ಯುತ್ತಮ ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸಿದ್ದಾರೆ.

ಬೆಂಗಳೂರಿನಲ್ಲಿ ಇದೆ ಸೆಪ್ಟೆಂಬರ್ 18 ರಂದು ನಡೆದ 15 ನೇ ವಾರ್ಷಿಕ ರಾಜ್ಯ ಮಟ್ಟದ KCIAPM ಪದವಿಪೂರ್ವ ರೋಗಶಾಸ್ತ್ರ ರಸಪ್ರಶ್ನೆಯಲ್ಲಿ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ 2 ನೇ ವರ್ಷದ MBBS ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. 

ವಿದ್ಯಾರ್ಥಿಗಳಾದ ಶುಭಿ ಅಗರ್ವಾಲ್ ಮತ್ತು ಹರ್ಷಿತಾ ನಾಯರ್ ಪ್ರಥಮ ಬಹುಮಾನವನ್ನು ಪಡೆದುಕೊಂಡಿರುದ್ದಾರೆ. ಬೆಳಗಾವಿಯ ಬಿಮ್ಸ್‌ನ ಗೌರವಾನ್ವಿತ ನಿರ್ದೇಶಕ ಡಾ. ಅಶೋಕ್ ಕುಮಾರ ಶೆಟ್ಟಿ ಮತ್ತು ಪ್ರೊಫೆಸರ್ ಮತ್ತು ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ.ರೇಖಾ ಎಂ ಹರವಿ ಮತ್ತು ವಿಭಾಗದ ಎಲ್ಲಾ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button