Kannada NewsKarnataka News

ಏಳುಕೊಳ್ಳದ ನಾಡಿನತ್ತ ಭಕ್ತಸಾಗರ

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ನವರಾತ್ರಿ ಐದನೇ ದಿನದ ಅಂಗವಾಗಿ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡ ಗುರುವಾರ ಭಕ್ತರಿಂದ ತುಂಬಿ ತುಳುಕಿತು. ಸುಡು ಬಿಸಿಲಲ್ಲೂ ತಾಸುಗಟ್ಟಲೇ ಸರತಿ ಸಾಲಲ್ಲಿ ನಿಂತ ಭಕ್ತಗಣ, ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾದರು.
ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸೋ ಉಗರಗೋಳ, ಸವದತ್ತಿ, ಜೋಗುಳಬಾವಿ ಮಾರ್ಗಗಳು ವಾಹನದಟ್ಟಣೆ, ಜನದಟ್ಟಣೆಯಿಂದ ಕೂಡಿವೆ. ತಡರಾತ್ರಿಯಾದರೂ ಗುಡ್ಡಕ್ಕೆ ಭಕ್ತರು ಹರಿದು ಬರುತ್ತಿದ್ದು, ಶುಕ್ರವಾರ ಬೆಳಗಿನ ಪೂಜೆಗೆ ಸಾಕ್ಷಿಯಾಗಲಿದ್ದಾರೆ. ಶನಿವಾರ ದಸರಾ ಏಳನೇ ದಿನದ ಅಂಗವಾಗಿ ಬೃಹತ್ ಜಾತ್ರೆ ಜರುಗಲಿದ್ದು, ಲಕ್ಷಾಂತರ ಭಕ್ತರು ಭಕ್ತಿಯ ಅಲೆಯಲ್ಲಿ ಮಿಂದೇಳಲಿದ್ದಾರೆ.
ಗುಡ್ಡದ ಅಂಗಡಿ-ಮುಂಗಟ್ಟುಗಳಲ್ಲಿ ಎಣ್ಣೆ ಮಾರಾಟ ಜೋರಾಗಿ ನಡೆಯುತ್ತಿದೆ. ನೆರೆ ನೋವಿನ ನಡುವೆಯೂ ಗುಡ್ಡಕ್ಕೆ ಬರುವ ಭಕ್ತರ ಸಂಖ್ಯೆ ಕ್ಷೀಣಿಸಿಲ್ಲ. ಜನ ಮುಗಿಬಿದ್ದು ಎಣ್ಣೆ ಖರೀದಿಸುತ್ತಿದ್ದು, ಭಕ್ತಿಯಿಂದ ದೀಪಕ್ಕೆ ಹಾಕಿ ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ನಿಗದಿತ ಸ್ಥಳಗಳಲ್ಲಿ ಅಳವಡಿಸಿದ ದೀಪಗಳಲ್ಲೇ ಎಣ್ಣೆ ಹಾಕಿ ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ಕೋರಿದ್ದಾರೆ. ಪೊಲೀಸ್ ಇಲಾಖೆಯು ಬಿಗಿ ಭದ್ರತೆ ಕೈಗೊಂಡಿದೆ‌. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನ ನಡೆಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button