Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ಪೋಕ್ಸೋ ಕೇಸಲ್ಲಿ ಮೊದಲ ಗಲ್ಲು ಶಿಕ್ಷೆ* *3 ವರ್ಷದ ಬಾಲಕಿ ಅತ್ಯಾಚಾರ, ಕೊಲೆಗಡುಕನಿಗೆ ಮರಣ ದಂಡನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 7 ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಹಾರೂಗೇರಿಯ 3 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣ ಇದೀಗ ತನಿಖೆಯಾಗಿ, ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ದಿನಾಂಕ 21/09/2017 ರಂದು ಸುಧಾ ಅಪ್ಪಾಸಾಬ ಸನ್ನಕ್ಕಿನವರ ಸಾ।। ಹಿಡಕಲ್ಲ, ಹಾಲಿ ಕುರಬಗೋಡಿ ಹಾರೂಗೇರಿ, ತಾ।। ರಾಯಬಾಗ ಇವರು ತನ್ನ 3 ವರ್ಷದ ಮಗಳ ಅಪಹರಣದ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರನ್ನು ಕೊಟ್ಟಿದ್ದರು.

ತನ್ನ 3 ವರ್ಷದ ಮಗಳಿಗೆ ದಿನಾಂಕ. 21-09-2017 ರಂದು 5.30 ಗಂಟೆಯ ಸುಮಾರಿಗೆ ಉದ್ದಪ್ಪ ರಾಮಪ್ಪ ಗಾಣಿಗೇರ (ವಯಸ್ಸು 32 ವರ್ಷ) ಸಾ॥ ಕುರಬಗೋಡಿ ಹಾರೂಗೇರಿ ಇವನು ಮನೆಯ ಮುಂದಿನಿಂದ ಅಪಹರಣ ಮಾಡಿಕೊಂಡು ಹೋಗಿದ್ದಾನೆ ಎಂದು ದೂರಲಾಗಿತ್ತು.

ಎಮ್. ಆರ್. ಎಮ್. ತಹಸೀಲ್ದಾರ ಪಿಎಸ್‌ಐ ಹಾರೂಗೇರಿ ಪೊಲೀಸ್ ಠಾಣೆ ದೂರು ಸ್ವೀಕರಿಸಿಕೊಂಡು ಹಾರೂಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 183/2024 ಕಲಂ ಕಲಂ. 363 ಐಪಿಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು.

ಪ್ರಕರಣದಲ್ಲಿಯ ತನಿಖೆ ಕಾಲಕ್ಕೆ ಇದರಲ್ಲಿಯ ದೂರುದಾರರಾದ ಸುಧಾ ಅಪ್ಪಾಸಾಬ ಸಣ್ಣಕ್ಕಿಯವರ 3 ವರ್ಷದ ಮಗಳನ್ನು ಉದ್ದಪ್ಪ ರಾಮಪ್ಪ ಗಾಣಿಗೇರ ಸಾ॥ ಕುರಬಗೋಡಿ ಹಾರೂಗೇರಿ ಈತನು ಹಾರೂಗೇರಿಯ ಕುರಬಗೋಡಿಯಿಂದ ಅತ್ಯಾಚಾರ ಮಾಡುವ ಉದ್ದೇಶದಿಂದ ಬಲವಂತವಾಗಿ ಅಪಹರಣ ಮಾಡಿಕೊಂಡು ಕುರಬಗೋಡಿಯಲ್ಲಿರುವ ಭೀಮಪ್ಪ ನೇಮಣ್ಣ ನಾಗನೂರ ಇವರ ಕಬ್ಬಿನ ಹೊಲದಲ್ಲಿ ಅತ್ಯಾಚಾರ ಮಾಡಿದ್ದ. ನಂತರ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮುಖದಿಂದ ಸೊಂಟದವರೆಗೆ ಮಣ್ಣು ಮುಚ್ಚಿ ಬಂದಿದ್ದ.

ತನಿಖಾಧಿಕಾರಿಯಾದ ಸಿಪಿಐ ಸುರೇಶ. ಪಿ. ಶಿಂಗಿ ಉದ್ದಪ್ಪ ಅವರು ರಾಮಪ್ಪ ಗಾಣಿಗೇರ ಮೇಲೆ ದಿನಾಂಕ 08/12/2017 ರಂದು ದೋಷಾರೋಪಣ ಪತ್ರ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಹಾರೂಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 183/2017 ಕಲಂ 366ಎ, 376 302, 201 ಐ.ಪಿ.ಸಿ ಮತ್ತು 4, 6, 8, 12 ಪೋಕ್ಸೋ ಕಾಯ್ದೆ 2012 (ಎಸ್‌ಸಿ ನಂಬರ: 431/2017) ನೇ ಪ್ರಕರಣವನ್ನು ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಎಫ್‌ಟಿಎಸ್‌ಸಿ-1) ನ್ಯಾಯಾಲಯದಲ್ಲಿ ವಿಚಾರಣೆ ಕೈಕೊಂಡು ಪ್ರಕರಣದ ಬಗ್ಗೆ ಎಲ್. ಬಿ. ಪಾಟೀಲ, ಸಾರ್ವಜನಿಕ ಅಭಿಯೋಜಕರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಲಯವು ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರ ಈತನಿಗೆ ಗಲ್ಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಪ್ರಕರಣದ ತನಿಖೆ ಕೈಕೊಂಡ ಸುರೇಶ, ಪಿ. ಶಿಂಗಿ. ಸಿಪಿಐ ಮತ್ತು ಪ್ರಕರಣದ ಪತ್ತೆ ಕಾರ್ಯದಲ್ಲಿ ಎಮ್. ಆರ್. ಎಮ್. ತಹಸೀಲ್ದಾರ. ಪಿಎಸ್‌ಐ. ಪಿ. ಆರ್. ಗುಡೋಡಗಿ, ಶಿವಾನಂದ ಬಡಿಗೇರ, ವಿಷ್ಣು ಗಾಯಕವಾಡ, ಆರ್. ಪಿ. ಕಟೀಕರಿ ರವರು ಕಾರ್ಯನಿರ್ವಹಿಸಿದ್ದು ಇವರ ಕಾರ್ಯವನ್ನು ಎಸ್ಪಿ ಭೀಮಾಶಂಕರ ಗುಳೇದ ಹಾಗೂ ಹೆಚ್ಚುವರಿ ಎಸ್ಪಿ ಶೃತಿ ಎನ್. ಎಸ್. ಮತ್ತು ಆರ್. ಬಿ. ಬಸರಗಿ ಹಾಗೂ ಡಿಎಸ್ಪಿ ಪ್ರಶಾಂತ ಮುನ್ನೋಳ್ಳಿ ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button