ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಸ್ ನಲ್ಲಿ ಆಭರಣ ಕದ್ದಿದ್ದ ಕಳ್ಳಿ ಹಾಗೂ ಓರ್ವ ಮೋಟಾರ್ ಸೈಕಲ್ ಕಳ್ಳನನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿನಾಂಕ: 19/09/2024 ರಂದು ಸವಿತಾ ಕೊಂ ಕೃಷ್ಣಾತ ಮಗದುಮ್, (ಸಾ: ಮನೆ ನಂ: 544 ಯರನಾಳ, ತಾ: ನಿಪ್ಪಾಣಿ, ಜಿ: ಬೆಳಗಾವಿ ಹಾಲಿ: ಕುದರೆಮನೆ ತಾ: ಬೆಳಗಾವಿ) ಇವರು ನಿಪ್ಪಾಣಿಯಿಂದ ಬೆಳಗಾವಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಮೂಲಕ ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಬಸ್ಸಿನಿಂದ ಜನದಟ್ಟಣೆಯಲ್ಲಿ ಇಳಿಯುವ ಸಂದರ್ಭದಲ್ಲಿ ಬ್ಯಾಗದಲ್ಲಿದ್ದ 43 ಗ್ರಾಂ ತೂಕದ ಬಂಗಾರದ ಆಭರಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಪರಾಧ ಸಂಖ್ಯೆ: 124/2024, ಕಲಂ: 303(2) ಬಿ.ಎನ್.ಎಸ್.-2023 ನೇದ್ದರ ಪ್ರಕಾರ ದೂರು ದಾಖಲಾಗಿದ್ದು ದಿನಾಂಕ: 28/09/2024 ರಂದು ಆರೋಪಿತಳಾದ ಪೂನಂ ಕೊಂ ಅಮೀತ ಸಕಟ, (ವಯಾ: 39 ವರ್ಷ, ಸಾ: ರೇಣುಕಾ ಮಂದಿರ ಹತ್ತಿರ ಬುದ್ದನಗರ ನಿಪ್ಪಾಣಿ, ತಾ: ನಿಪಾಣಿ, ಜಿ: ಬೆಳಗಾವಿ) ಇವಳನ್ನು ಬಂಧಿಸಿ ಬಂಗಾರದ ಆಭರಣ ಒಟ್ಟು 43 ಗ್ರಾಂ, 3,00,000/-ರೂ. ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಅದರಂತೆ; ದಿನಾಂಕ: 20/12/2023 ರಂದು ಮೊಹ್ಮದಇಲಿಯಾಸ ಗೌಸಮೊಹಿದ್ದಿನ್ ಮುಲ್ಲಾ, (ಸಾ: ದೇಶನೂರ, ಮುಲ್ಲಾ ಗಲ್ಲಿ, ತಾ: ಬೈಲಹೊಂಗಲ್, ಜಿ: ಬೆಳಗಾವಿ. ಹಾಲಿ: ಪ್ಲಾಟ ನಂ: 6-ಬಿ, 2 ನೇ ಬಿ ಕ್ರಾಸ, ಅಜಾದ ನಗರ ಬೆಳಗಾವಿ) ಇವರು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ: 206/2023, ಕಲಂ: 379 ಐಪಿಸಿ ಪ್ರಕಾರ) ಮೋಟಾರ ಸೈಕಲ್ ಕಳ್ಳತನವಾದ ಬಗ್ಗೆ ದೂರನ್ನು ಕೊಟ್ಟಿದ್ದು ಇರ್ಪಾನ ತಂದೆ ರಫೀಕ ಶೇಖ, (ವಯಾ: 22 ವರ್ಷ, ಜಾತಿ: ಮುಸ್ಲಿಂ, ಉದ್ಯೋಗ: ಜಾತ್ರೆಗಳಲ್ಲಿ ಸ್ಟೇಶನರಿ ವ್ಯಾಪಾರ, ಸಾ: ಸತ್ಯಸಾಯಿ ಕಾಲೋನಿ, ವೈಭವ ನಗರ ಬೆಳಗಾವಿ) ಇವನನ್ನು ಬಂಧಿಸಿ ಮಾರ್ಕೆಟ್ ಠಾಣೆಯಲ್ಲಿ ದಾಖಲಾದ 1 ಪ್ರಕರಣ, ಹಾಗೂ ಇತರೆ 2, ಒಟ್ಟು 3, ಪ್ರಕರಣಗಳ, 1,20,000/-ರೂ ಕಿಮ್ಮತ್ತಿನ ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತರು, ಮತ್ತು ಪೊಲೀಸ್ ಉಪ ಆಯುಕ್ತರು (ಕಾಸು) ಪೊಲೀಸ್ ಉಪ ಆಯುಕ್ತರು (ಅವಿ) ಹಾಗೂ ಸಹಾಯಕ ಪೊಲೀಸ ಆಯುಕ್ತರು ಮಾರ್ಕೇಟ್ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಮಾರ್ಕೇಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ ಮಹಾಂತೇಶ ಧಾಮಣ್ಣವರ, ಹಾಗೂ ಪೊಲೀಸ್ ಸಬ್ ಇನ್ಸಪೇಕ್ಷರ ಹೆಚ್.ಎಲ್.ಕೆರೂರ, ಹಾಗೂ ಪೊಲೀಸ್ ಸಿಬ್ಬಂದಿಗಳಾದ ಲಕ್ಷ್ಮಣ ಕಡೋಲ್ಕರ, ಶಿವಪ್ಪ ತೇಲಿ, ಐ.ಎಸ್.ಪಾಟೀಲ, ಶಂಕರ ಕುಗಟೊಳ್ಳಿ, ಸುರೇಶ ಕಾಂಬಳೆ, ಕಾರ್ತಿಕ ಎಮ್.ಜಿ, ಶ್ರೀಮತಿ ಅನೀತಾ ಹಂಚಿನಾಳ, ಸಿಬ್ಬಂದಿ ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆಯನ್ನು ಮಾಡಿದ್ದು ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ