Politics

*ಮಾಜಿ ಸಿಎಂಗಳಿಗೂ ಮುನಿರತ್ನ ಹನಿಟ್ರ್ಯಾಪ್; ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ ಪಡೆದಿದ್ದ ಶಾಸಕ: ಸಂತ್ರಸ್ತೆ ಸ್ಫೋಟಕ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂತ್ರಸ್ತೆ, ಮುನಿರತ್ನ ಮಾಜಿ ಮುಖ್ಯಮಂತ್ರಿಗಳಿಗೂ ಹನಿಟ್ರ್ಯಾಪ್ ಮಾಡಿದ್ದಾರೆ. ಮಾಜಿ ಸಿಎಂ ಒಬ್ಬರ ಆಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿಯೇ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಎಸಿಪಿ, ಇನ್ಸ್ ಪೆಕ್ಟರ್ ಗಳ ಖಾಸಗಿ ವಿಡಿಯೋ ಕೂಡ ಅವರ ಬಳಿ ಇದೆ. ಅಷ್ಟೇ ಅಲ್ಲ ನಾಲ್ವರು ಮಾಜಿ ಸಿಎಂ ಗಳ ಖಾಸಗಿ ವಿಡಿಯೋ ಅವರ ಬಳಿ ಇದೆ ಎಂದು ತಿಳಿಸಿದ್ದಾರೆ.

ನಾಲ್ವರಿಗೆ ಏಡ್ಸ್ ಟ್ರ್ಯಾಪ್ ಮಾಡುವ ಪ್ಲಾನ್ ಇತ್ತು. ಮುನಿರತ್ನ ಬಳಿ ಹಲವರ ಖಾಸಗಿ ವಿಡಿಯೋ ಇದ್ದು, ಅದನ್ನು ಇಟ್ಟುಕೊಂಡೇ ತನ್ನ ರಾಜಕೀಯ ಎದುರಾಳಿಗಳನ್ನು ಹಣಿಯುತ್ತಿದ್ದರು. ಬ್ಲಾಕ್ ಮೇಲ್ ಮಾಡುವ ಮೂಲಕ ಎದುರಾಳಿಗಳನ್ನು ಮಣಿಸುತ್ತಿದ್ದರು. ನನ್ನನ್ನು ಹೆದರಿಸಿ ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ. ಗೋದಾಮಿನಲ್ಲಿ ಕುದಿ ಹಾಕಿ ಕೃತ್ಯವೆಸಗಿದ್ದಾರೆ ಎಂದಿದ್ದಾರೆ.

ಮುನಿರತ್ನ ಜಾಮೀನು ಪಡೆದು ಹೊರಬಂದರೆ ನನಗೆ ಜೀವ ಭಯವಿದೆ. ಆತ ಬಿಡುಗಡೆಯಾದ ಬಳಿಕ ಬ್ರೇನ್ ಮ್ಯಾಪಿಂಗ್ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button