Karnataka News
*ರಾಜ್ಯ ರಾಜಕಾರಣದ ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕಾರಣದಲ್ಲಿ ದುರ್ಯೋಧನ ಗೆಲ್ಲುತ್ತಾನೆ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಕುರಿತು ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿಗಳಿಗೆ ನೋವು ಕೊಟ್ಟಾಗಿದೆ. ಮುಖ್ಯಮಂತ್ರಿಗಳ ಪತ್ನಿ ರಂಗ ಪ್ರವೇಶ ಮಾಡಿಯಾಗಿದೆ. ಈ ಮಹಾಭಾರತದಲ್ಲಿ ರಾಜ ಗೆಲ್ಲುತ್ತಾನೆ. ಆದರೆ ದೈವಬಲ ಈಗ ಇಲ್ಲ. ಇನ್ನೂ ಸ್ವಲ್ಪ ದಿನ ರಾಜಕೀಯ ಏರಪೇರು ನಡೆಯುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೇಲಿಂದ ಮೇಲೆ ಶಾಕ್ ಎದುರಾಗ್ತಿದೆ. ಮುಡಾ ಬದಲಿ ನಿವೇಶನ ಹಂಚಿಕೆ ಕೇಸ್‌ನ ವಿಚಾರಣೆ ತನಿಖೆ ಹಂತದಲ್ಲಿರುವ ಬೆನ್ನಲ್ಲೇ ಸಿದ್ದರಾಮಯ್ಯಗೆ ಮತ್ತೊಂದು ಆಘಾತ ಎದುರಾಗಿದೆ. ಅರ್ಕಾವತಿ ಬಡಾವಣೆಯ ನಿವೇಶನದಾರರು ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.




