Belagavi NewsBelgaum NewsKarnataka News

*ನರೇಗಾ ಯೋಜನೆಯ ಸದುಪಯೋಗಪಡೆದುಕೊಳ್ಳಿ: ಇಒ ರಮೇಶ ಹೆಡಗೆ ಕರೆ*

ಉದ್ಯೋಗ ವಾಹಿನಿ ವಾಹನಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ : ಬೆಳಗಾವಿ ತಾಲ್ಲೂಕಿನಲ್ಲಿ ಉದ್ಯೋಗ ಖಾತರಿ ನಡೆ ಸಬಲತೆಯಡೆಗೆ ಅಭಿಯಾನ ಪ್ರಾರಂಭವಾಗಿದ್ದು. ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಜನರು ಪಡೆದುಕೊಳ್ಳಬೇಕು. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಪ್ರತಿ ಗ್ರಾಮ ಪಂಚಾಯಿತಿಯಿಂದ 10 ರಿಂದ 50ರವರೆಗೆ ದನದ ಕೊಟ್ಟಿಗಳನ್ನು ಅರ್ಹಫಲಾನುಭವಿಗಳಿಗೆ ನೀಡಲು ಆದೇಶಿಸಿದ್ದು, ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ದನದ ಕೊಟ್ಟಿಗೆಗಳನ್ನು ಪಡೆದುಕೊಳ್ಳಿ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ ಹೆಡಗೆ ಅವರು ಹೇಳಿದರು.

ತಾಲ್ಲೂಕ ಪಂಚಾಯತ ಕಚೇರಿ ಆವರಣದಲ್ಲಿ ಗುರುವಾರ (ಅ.24) ಉದ್ಯೋಗ ಖಾತರಿ ನಡೆ ಸಬಲತೆಯಡೆಗೆ ಅಭಿಯಾನದ ನಿಮಿತ್ಯ ಉದ್ಯೋಗ ವಾಹಿನಿ ವಾಹನಕ್ಕೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ ಹೆಡಗೆ ಅವರು ಹಸಿರು ನಿಶಾನೆ ತೊರಿಸುವುದರ ಮೂಲಕ ಚಾಲನೆ ನೀಡಿದರು.

ಉದ್ಯೋಗ ವಾಹಿನಿಯು ಬೆಳಗಾವಿ ತಾಲ್ಲೂಕಿನ ಗ್ರಾಮಗಳಿಗೆ ಸಂಚರಿಸಿ ನರೇಗಾ ಯೋಜನೆಯಡಿ ದೊರೆಯುವ ಕೃಷಿ ಹೊಂಡ, ಅಲ್ಪ ಆಳದ ಬಾವಿ ಜಮೀನು ಸಮತಟ್ಟು, ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳ ಕುರಿತು ಪ್ರಚಾರ ಕೈಗೊಳ್ಳಲಿದೆ.

ಈ ಸಂದರ್ಭದಲ್ಲಿ ಪಂಚಗ್ಯಾರಂಟಿ ಯೋಜನೆಯ ತಾಲ್ಲೂಕ ಅಧ್ಯಕ್ಷರಾದ ಬೈರು ಕಾಂಬಳೆ, ಸಹಾಯಕ ನಿರ್ದೇಶಕರಾದ (ಗ್ರಾ.ಉ) ಬಿ.ಡಿ ಕಡೇಮನಿ, ತಾಲ್ಲೂಕಾ ಯೋಜನಾಧಿಕಾರಿಗಳಾದ ಎನ್.ಎಸ್. ಹೂಗಾರ, ಡಿಎಸ್‌ಎಸ್ ನಾಯಕರಾದ ಗುಂಡು ತಳವಾರ, ತಾಪಂ ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚಿ, ತಾಲ್ಲೂಕ ಐಇಸಿ ಸಂಯೋಜಕ ರಮೇಶ ಮಾದರ ಸೇರಿಂದತೆ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ವಿವಿಧ ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button