ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಮರಾಠಾ ಮಂಡಳದ ನಾಥಾಜಿರಾವ್ ಹಲಗೇಕರ್ ದಂತ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ಬೆಳ್ಳಿ ಹಬ್ಬ ಭಾನುವಾರ ನಡೆಯಲಿದೆ.
ಮರಾಠಾ ಮಂಡಳ ಚೇರಮನ್ ರಾಜಶ್ರೀ ನಾಗರಾಜು (ಹಲಗೇಕರ್) ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಹಾಗೂ ಕಾಲೇಜಿನ ಸಾಧನೆಗಳ ಕುರಿತು ಮಾಹಿತಿ ನೀಡಿದರು. ಸಂಜೆ 5 ಗಂಟೆಗೆ ನಡೆಯಲಿರುವ ಸಮಾರಂಭವನ್ನು ಗುರುಗೋವಿಂದ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹೇಶ ವರ್ಮಾ ಉದ್ಘಾಟಿಸುವರು.
1992ರಲ್ಲಿ ಆರಂಭವಾಗಿರುವ ವೈದ್ಯಕೀಯ ವಿಜ್ಞಾನ ಕೇಂದ್ರ ಕಳೆದ 25 ವರ್ಷದಲ್ಲಿ ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳು ಕಲಿಯಲು ಬರುತ್ತಿದ್ದಾರೆ.
ಇದೇ ವೇಳೆ ಬೆಳ್ಳಿ ಹಬ್ಬದ ಸ್ಮರಣೆಗಾಗಿ ಬುದ್ದಿಮಾಂದ್ಯ ಮಕ್ಕಳ ಶಾಲೆ, ಔಷಧ ಸಂಶೋಧನಾ ಕೇಂದ್ರ, ಎನಿಮಲ್ ಹೌಸ್ ಮತ್ತು ಮೆಡಿಕಲ್ ಉದ್ಯಾನವನ್ನು ಆರಂಭಿಸಲಾಗುತ್ತಿದೆ. ಇವುಗಳ ಉದ್ಘಾಟನೆಯನ್ನು ರಾಜೀವ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ, ಆಂದ್ರಪ್ರದೇಶದ ಅಟಲ್ ಇನೋವೇಶನ್ ಸೆಂಟರ್ ಸಿಇಒ ಕಿಂಗ್ ಶುಕ್ ಪೋದ್ದಾರ, ಪದ್ಮಭೂಷಣ ಬ್ರಿಗೇಡಿಯರ್ ಡಾ.ಅನಿಲ ಕೊಹ್ಲಿ, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ರಾಮಣ್ಣ ರಾಮನಾಥನ್ ಉದ್ಘಾಟಿಸುವರು.
ನಾಗರಾಜ ಯಾದವ, ಡಾ.ರಮಾಕಾಂತ ನಾಯಕ, ಡಾ.ಕಿಶೋರ ಭಟ್, ಮಧುಶ್ರೀ ಪೂಜಾರ, ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ