Belagavi NewsBelgaum NewsKannada NewsKarnataka NewsLatest

ಬೀರೇಶ್ವರ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿದ್ದ ರವೀಂದ್ರ ಚೌಗಲಾ ನಿವೃತ್ತಿ, ಸತ್ಕಾರ

*ರವೀಂದ್ರ ಚೌಗಲಾ ಬೀರೇಶ್ವರ ಸಂಸ್ಥೆಗೆ ಸಲ್ಲಿಸಿದ ಸೇವೆಗೆ ಕಾರ್ಯ ಶ್ಲಾಘನೀಯ ಶಶಿಕಲಾ ಜೊಲ್ಲೆ ಅಭಿಮತ*

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಗ್ರೂಪ್ ನ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಿಟಿ ಲಿ.,ಯಕ್ಸಂಬಾ  (ಮಲ್ಟಿ -ಸ್ಟೇಟ್) ಸಂಸ್ಥೆಯಲ್ಲಿ 23 ವರ್ಷಗಳಿಂದ ಪ್ರಧಾನ ವ್ಯವಸ್ಥಾಪಕರಾದ ರವೀಂದ್ರ ಚೌಗಲಾ ಅವರು ಇಂದು ನಿವೃತ್ತಿ ಹೊಂದಿದ ನಿಮಿತ್ಯ ಅವರನ್ನು ಜೊಲ್ಲೆ ಗ್ರೂಪ್ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಅಣ್ಣಾ ಸಾಹೇಬ ಜೊಲ್ಲೆ, ಹಾಗೂ ನಿಪ್ಪಾಣಿ ಶಾಸಕರಾದ ಜೊಲ್ಲೆ ಗ್ರೂಪ್ ಸಹ ಸಂಸ್ಥಾಪಕರಾದ ಶಶಿಕಲಾ ಜೊಲ್ಲೆ ಹಾಗೂ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಸನ್ಮಾನಿಸಿದರು.

ಇದೇ ವೇಳೆ ಶಾಸಕರಾದ ಶಶಿಕಲಾ ಜೊಲ್ಲೆ ಮಾತನಾಡಿ 1991ರಲ್ಲಿ ಗ್ರಾಮ ದೇವರಾದ ಶ್ರೀ ಬೀರೇಶ್ವರ ಹೆಸರಿನಲ್ಲಿ ಪ್ರಾರಂಭವಾದ ಸಂಸ್ಥೆ ಇಂದು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ 219 ಶಾಖೆಗಳನ್ನು ಹೊಂದಿದ್ದು,ಇದಕ್ಕೆ ಕಾರಣಿಕರ್ತರಾದ ನಮ್ಮ ಪ್ರಾಮಾಣಿಕ,ಶ್ರದ್ಧೆ,ಭಕ್ತಿ,ನಿಷ್ಠೆಯಿಂದ ಸೇವೆ ಸಲ್ಲಿಸಿ,ಬೀರೇಶ್ವರ ಸಂಸ್ಥೆಯನ್ನು ರಾಜ್ಯ,ಅಂತಾರಾಜ್ಯ ಮಟ್ಟದಲ್ಲಿ ಬೆಳಯಲು ಕಾರಣರಾದ ರವೀಂದ್ರ ಚೌಗಲಾ ಅವರನ್ನು ಸತ್ಕರಿಸಿ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ಪ್ರಧಾನ ವ್ಯವಸ್ಥಾಪಕರಾದ ವ್ಯವಸ್ಥಾಪಕರಾದ ಶ್ರೀ ರವೀಂದ್ರ ಚೌಗಲಾ ಮಾತನಾಡಿ ಸಂಸ್ಥೆಯಲ್ಲಿ 23 ಸೇವೆ ಸಲ್ಲಿಸಿದ್ದು,ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ, ಹಾಗೂ ಶಶಿಕಲಾ ಜೊಲ್ಲೆ ಅವರು ನನ್ನನ್ನು ತಮ್ಮ ಕುಟುಂಬ ಸದಸ್ಯರಂತೆ ಕಂಡಿದ್ದು,ಅವರಿಗೆ ನಾನು ಸದಾ ಚಿರಋಣಿಯಾಗಿದ್ದೇನೆ.ಹಾಗೂ ಹೃದಯಪೂರ್ವಕ ಧನ್ಯವಾದಗಳು.ಜ್ಯೋತಿ ಹಾಗೂ ಓ.ಜಿ.ಸಿ.ಎಸ್.ಸಂಸ್ಥೆಯ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರೂ ಸತ್ಕರಿಸಿ ಅಂಭಿನಂದನೆ ಸಲ್ಲಿಸಿದ್ದು ಅವರಿಗೂ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ಜೊಲ್ಲೆ ಗ್ರೂಪ್ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ, ಸಹ ಸಂಸ್ಥಾಪಕರಾದ ಶಶಿಕಲಾ ಜೊಲ್ಲೆ,ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ,ಉಪಾಧ್ಯಕ್ಷರಾದ ಸಿದ್ರಾಮ ಗಡದೆ, ಬಾಬುರಾವ ಮಾಳಿ,ಲಕ್ಷ್ಮಣ ಕಬಾಡೆದ,ಪವನ ಪಾಟೀಲ,ಮಹೇಶ ಭಾತೆ, ಜ್ಯೋತಿ ಗಿಡ್ಡ,ವಿಶ್ವನಾಥ್ ಪೇಟಕರ,ಅನ್ವರ ದಾಡಿವಾಲೆ,ಬೀಪಿನ್ ದೇಶಪಾಂಡೆ,ರಮೇಶ ಪಾಟೀಲ, ಜ್ಯೋತಿ ಸಂಸ್ಥೆಯ ಹಾಗೂ ಓ.ಜಿ.ಸಿ.ಎಸ್.ನ ನಿರ್ದೇಶಕ ಮಂಡಳಿ ಸದಸ್ಯರು, ಬಹದ್ದೂರ ಗುರವ,ಮಹಾದೇವ ಮಂಗಾವತೆ,ರಮೇಶ ಕುಂಬಾರ,ಸುರೇಶ ಮಾನೆ, ಶಿವಪುತ್ರ ಡಬ್ಬವನ್ನವರ,ಶೇಖರ ಪಾಟೀಲ,ಸಂಸ್ಥೆಯ ಪದಾಧಿಕಾರಿಗಳು ಹಾಗೂ ಬಸವಪ್ರಸಾದ ಜೊಲ್ಲೆ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button