ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಬೆಳಗಾವಿಯ ದಂಡು ಮಂಡಳಿಯ ಪ್ರದೇಶದಲ್ಲಿ ಬರುವ ಆಟೋಗಳಿಗೂ ಪೇ ಪಾರ್ಕಿಂಗ್ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ಶುಕ್ರವಾರ ದಂಡು ಮಂಡಳಿಯ ಅಧಿಕಾರಿಗಳಿಗೆ ಕರವೇ ನಿಯೋಗ ಭೇಟಿಯಾಗಿ ಆಟೋಗಳಿಗೆ ಶುಲ್ಕ ವಿಧಿಸುತ್ತಿರುವದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಕರವೇ ಮನವಿಗೆ ಸ್ಪಂದಿಸಿದ ದಂಡು ಮಂಡಳಿಯ ಅಧಿಕಾರಿಗಳು ಆಟೋಗಳಿಗೆ ಪೇ ಪಾರ್ಕಿಂಗ್ ವಸೂಲಿ ಮಾಡುವದನ್ನು ನಿಲ್ಲಿಸುವಂತೆ ಮೌಖಿಕ ಆದೇಶ ಮಾಡಿದ್ದಾರೆ.
ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿಯಾಗಿ ಪೇ ಪಾರ್ಕಿಂಗ್ ವಸೂಲಿ ಮಾಡುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಶುಕ್ರವಾರ ಒತ್ತಾಯಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ