Karnataka News

*ಮೊಬೈಲ್ ನೋಡುತ್ತಿದ್ದ ಮಗನನ್ನು ಹೊಡೆದು ಕೊಂದ ತಂದೆ*

ಪ್ರಗತಿವಾಹಿನಿ ಸುದ್ದಿ: ಓದುವುದನ್ನು ಬಿಟ್ಟು ಸದಾ ಮೊಬೈಲ್ ನಲ್ಲಿ ತಲ್ಲೀನನಾಗಿರುತ್ತಿದ್ದ ಮಗನನ್ನು ತಂದೆಯೊಬ್ಬ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತೇಜಸ್ (14) ಮೃತ ಮಗ. ರವಿಕುಮಾರ್ ಮಗನನ್ನೆ ಕೊಂದ ತಂದೆ. ಯಾವಾಗಲೂ ಮೊಬೈಲ್ ನೋಡುತ್ತಿದ್ದ ತೇಜಸ್, ತನ್ನ ಮೊಬೈಲ್ ಹಾಳಾಗಿದೆ ರಿಪೇರಿ ಮಾಡಿಕೊಡುವಂತೆ ತಂದೆಗೆ ಕೇಳಿದ್ದಾನೆ. ತಂದೆ-ಮಗನ ನಡುವೆ ಗಲಾಟೆಯೆ ನಡೆದಿದೆ. ಕಳೆದ 20 ದಿನಗಳಿಂದ ಮಗ ಶಾಲೆಗೆ ಹೋಗದೆ ಪುಂಡರ ಜೊತೆ ಶಾಲೆ ಬಳಿ ತಿರುಗಾಡುತ್ತಿದ್ದನಂತೆ.

Home add -Advt

ಇದರಿಂದ ಬೇಸತ್ತ ತಂದೆ ಮಗನಿಗೆ ಬುದ್ದಿ ಹೇಳಿದ್ದಾರೆ. ಆದರೂ ಮಗ ಕೇಳದಿದ್ದಾಗ ಕೋಪಗೊಂಡು ಕ್ರಿಕೆಟ್ ಬ್ಯಾಟ್ ನಿಂದ ಹೊಡೆದಿದ್ದಾರೆ. ತಲೆ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ತಂದೆ ರವಿಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.

Related Articles

Back to top button