
ಪ್ರಗತಿವಾಹಿನಿ ಸುದ್ದಿ, ಮುಂಬೈ – ಮಹಾರಾಷ್ಟ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖಯ ಮಹಾನಿರ್ದೇಶಕಿಯಾಗಿ ಕನ್ನಡತಿ ಜಯಶ್ರೀ ಭೋಜ್ ಅಧಿಕಾರ ಸ್ವೀಕರಿಸಿದ್ದಾರೆ.
2003ರ ಮಹಾರಾಷ್ಟ್ರ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಜಯಶ್ರೀ ಭೋಜ, ಕೇಂದ್ರ ಹಾಗೂ ಮಹಾರಾಷ್ಟ್ರ ಸರಕಾರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಜಯಶ್ರೀ ಭೋಜ್ ಅವರು ಸೋಮವಾರ ದೀಪಕ್ ಕಪೂರ್ ಅವರಿಂದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಮಹಾನಿರ್ದೇಶನಾಲಯದ ಮಹಾನಿರ್ದೇಶಕರ ಹುದ್ದೆಯನ್ನು ವಹಿಸಿಕೊಂಡರು.
ಈ ಸಮಯದಲ್ಲಿ ಜಯಶ್ರೀ ಭೋಜ್ ಅವರಿಗ ಕರೀನಾ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಅಲ್ಲದೆ ಕಪೂರ್ ಅವರಿಗೆ ಪುಷ್ಪಗುಚ್ಛವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಭಾರಿ ನಿರ್ದೇಶಕ (ಪತ್ರಿಕಾ-ಸಾರ್ವಜನಿಕ ಸಂಪರ್ಕ) ದಯಾನಂದ ಕಾಂಬಳೆ, ಉಪನಿರ್ದೇಶಕ (ಆಡಳಿತ) ಗೋವಿಂದ ಎಗೋರಿ, ಉಪ ನಿರ್ದೇಶಕಿ (ಪ್ರದರ್ಶನಗಳು) ಸೀಮಾ ರಣಾಳಕರ, ಉಪನಿರ್ದೇಶಕ (ಪ್ರಕಾಶನ) ಅನಿಲ್ ಆಲೂರಕರ್ ಸೇರಿದಂತೆ ಹಿರಿಯ ಅಧಿಕಾರಿಗಳು-ನೌಕರರು ಉಪಸ್ಥಿತರಿದ್ದರು.
ಪರೇಶ ಮೇಸ್ತಾ ಸಾವು ಆಕಸ್ಮಿಕ ಎಂದು ವರದಿ ಸಲ್ಲಿಸಿದ ಸಿಬಿಐ
https://pragati.taskdun.com/kannada-news/paresh-mestha-not-murdered-cbi-submitted-report-to-court/