Belagavi NewsBelgaum NewsKarnataka NewsTravel

*ಹಲವು ರೈಲುಗಳ ಸಂಚಾರ ರದ್ದು*

ಪ್ರಗತಿವಾಹಿನಿ ಸುದ್ದಿ: ನಿಡವಂದ ಯಾರ್ಡ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ನಡೆಯುತ್ತಿದ್ದು, ಹಲವಾರು ರೈಲುಗಳ ಸಮಯದಲ್ಲಿ ಬದಲಾವಣೆ ಆಗುತ್ತಿದೆ ಹಾಗೂ ಹಲವು ರೈಲುಗಳ ಸಂಚಾರ ರದ್ದಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.‌

ರೈಲು ಸಂಚಾರ ರದ್ದು

ನವೆಂಬರ್ 23 ರಂದು ತುಮಕೂರು- ಬಾಣಸವಾಡಿ ಮೆಮು ವಿಶೇಷ ರೈಲು (ರೈಲು ಸಂಖ್ಯೆ 06512), ಚಿಕ್ಕಮಗಳೂರು- ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು (ರೈ.ಸಂ. 16239) ಮತ್ತು ಯಶವಂತಪುರ- ಚಿಕ್ಕಮಗಳೂರು ಡೈಲಿ ಎಕ್ಸ್ ಪ್ರೆಸ್ (ರೈ.ಸಂ.16240)  ರೈಲುಗಳ ಸಂಚಾರವನ್ನು ರದ್ದು ಮಾಡಲಾಗುತ್ತಿದೆ.

ರೈಲು ಸಂಚಾರ ಭಾಗಶಃ ರದ್ದು

ನವೆಂಬರ್ 23 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06571) ರೈಲು ಸೇವೆಯನ್ನು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06576) ರೈಲು ಸೇವೆಯನ್ನು ತುಮಕೂರು- ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

ನವೆಂಬರ್ 23 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (ರೈಲು ಸಂಖ್ಯೆ 06575) ರೈಲು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06572) ರೈಲು ಸೇವೆಯನ್ನು ತುಮಕೂರು-ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

ರೈಲುಗಳ ನಿಯಂತ್ರಣ

ನವೆಂಬರ್ 22 ರಂದು ಹೊರಡುವ ರೈಲು ಸಂಖ್ಯೆ 17392 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲನ್ನು  ಮಾರ್ಗದಲ್ಲಿ 20 ನಿಮಿಷ, ನವೆಂಬರ್ 24 ರಂದು ಹೊರಡುವ ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 30 ನಿಮಿಷ ಮತ್ತು ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ 120 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ತಡವಾಗಿ ಆರಂಭ

ನವೆಂಬರ್ 24 ರಂದು ಪ್ರಾರಂಭವಾಗುವ ಕೆಎಸ್ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಡೈಲಿ ಎಕ್ಸ್ ಪ್ರೆಸ್ (12725) ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ 30 ನಿಮಿಷ ಮತ್ತು ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್ ಸಿಟಿ ಡೈಲಿ ಎಕ್ಸ ಪ್ರೆಸ್ (16579) ರೈಲು ಯಶವಂತಪುರದಿಂದ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button