ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಕಾವೇರಿ ಯಾರಿಗೆ ಎನ್ನುವ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾವೇರಿಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಬಿಟ್ಟುಕೊಡಲು ಒಪ್ಪದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಗೇ ಉಳಿಸಿಕೊಂಡಿದ್ದಾರೆ.
ಕಳೆದ 6 ವರ್ಷದಿಂದ ಕಾವೇರಿ ನಿವಾಸದಲ್ಲಿ ವಾಸವಾಗಿರುವ ಸಿದ್ದರಾಮಯ್ಯ ಅದೇ ನಿವಾಸವನ್ನು ತಮಗೆ ಮುಂದುವರಿಸುವಂತೆ ಕೋರಿದ್ದರು. ಆದರೆ ಕಾವೇರಿ ನಿವಾಸವನ್ನು ಮುಖ್ಯಮಂತ್ರಿಗಳೇ ಬಳಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಹಾಗಾಗಿ ಅದನ್ನು ತಮಗೇ ಇಟ್ಟುಕೊಳ್ಳಲು ಯಡಿಯೂರಪ್ಪ ಸಹ ನಿರ್ಧರಿಸಿದ್ದಾರೆ. ಸಿದ್ದರಾಮಯ್ಯಗೆ ರೇಸ್ ವ್ಯೂವ್ -2ನ್ನು ನೀಡಲು ನಿರ್ಧರಿಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನಿವಾಸವನ್ನು ಬಳಸಲು ಆರಂಭಿಸಿದ್ದರು. ನಂತರ ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆ ನಿವಾಸವನ್ನು ಬಿಟ್ಟುಕೊಡಲು ಕೇಳದಿರುವುದರಿಂದ ಸಿದ್ದರಾಮಯ್ಯ ಯಾವುದೇ ಸಾಂವಿಧಾನಿಕ ಸ್ಥಾನಮಾನವಿಲ್ಲದಿದ್ದರೂ ಅಲ್ಲೇ ಮುಂದುವರಿದಿದ್ದರು.
ಇದೀಗ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಸರಕಾರಕ್ಕೆ ಪತ್ರ ಬರೆದ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲೇ ಮುಂದುವರಿಸಲು ಅವಕಾಶ ನೀಡುವಂತೆ ಕೋರಿದ್ದರು. ಆದರೆ ಅವರ ಕೋರಿಕೆಯನ್ನು ಯಡಿಯೂರಪ್ಪ ಪುರಸ್ಕರಿಸಲಿಲ್ಲ. ಹಾಗಾಗಿ ಈಗ ಸಿದ್ದರಾಮಯ್ಯ ಆ ನಿವಾಸ ಖಾಲಿ ಮಾಡಿ ರೇಸ್ ವ್ಯೂವ್ -2 ಕ್ಕೆ ಸ್ಥಳಾಂತರವಾಗಬೇಕಿದೆ.
ಇದನ್ನೂ ಓದಿ –
ಯಾರಿಗೆ ಒಲಿಯಲಿದೆ ಕಾವೇರಿ? ಯಡಿಯೂರಪ್ಪಗೋ, ಸಿದ್ದರಾಮಯ್ಯಗೋ?
ರಮೇಶ್ ಜಾರಕಿಹೊಳಿ ಮರಳಿ ಕಾಂಗ್ರೆಸ್ ಗೆ ಬರ್ತಾರಂತೆ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ