ಪ್ರಗತಿವಾಹಿನಿ ಸುದ್ದಿ: ನಮ್ರತಾ ಹೆಗಡೆಯವರು ಕಣ್ಣಿನ ಒಂದು ವಿಶಿಷ್ಟ ಸಮಸ್ಯೆಯಾದ ಆಂಬ್ಲಿಯೋಪಿಯಾ (ಲೇಜಿ ಐ) ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಮೊಬೈಲ್ ಬಳಸಿಕೊಂಡು ಮನೆಯಲ್ಲಿಯೇ ಕುಳಿತುಕೊಂಡು ಚಿಕಿತ್ಸೆ ಪಡೆಯುವ ನವೀನ ತಂತ್ರಜ್ಞಾನವನ್ನು ಅವಿಷ್ಕಾರ ಮಾಡಿದ್ದಾರೆ.
ದೃಷ್ಟಿ ಸಂಶೋಧನಾಕ್ಷೇತ್ರದಲ್ಲಿ ಇದೊಂದು ಮಹತ್ತರವಾದ ಸಾಧನೆಯಾಗಿದೆ. ಈ ಅನ್ವಯಿಕ ಸಂಶೋಧನೆಯನ್ನು ಭಾರತದ ಉತ್ಸಾಹಿ ಉದ್ಯಮ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಸೆಪ್ಟೆಂಬರ್ 2024ರಲ್ಲಿ ಉತ್ತಮ ಸಂಶೋಧನೆ ಎಂದು ಗುರುತಿಸಿ ಪ್ರಶಸ್ತಿ ನೀಡಿದೆ.
ನಮ್ರತಾ ಹೆಗಡೆಯವರು ಡಾ.ಕಲಿಕಾ ಬಂದಾಮ್ವರ್ ಅವರ ಮಾರ್ಗದರ್ಶನದಲ್ಲಿ ಸಿದ್ಧ ಪಡಿಸಿದ ಪ್ರೌಢ ಪ್ರಬಂಧಕ್ಕೆ ಚಂಡೀಗಢದ ಚಿತ್ಕಾರಾ ಯೂನಿವರ್ಸಿಟಿ ಪಿ. ಹೆಚ್. ಡಿ. ಪದವಿ ನೀಡಿದೆ. ಅವರ ಈ ಸಂಶೋಧನಾತ್ಮಕ ಪ್ರಬಂಧದ ಶೀರ್ಷಿಕೆ ” ವರ್ಚುವಲ್ಲ್ ರಿಯಾಲಿಟಿ ಬೇಸ್ಡ್ ಬೈನೋಕ್ಯುಲರ್ ವಿಷನ್ ಥೇರೋಪಿ ಫಾರ್ ಮ್ಯಾನೇಜ್ಮೆಂಟ್ ಆಫ್ ಆಂಬ್ಲಿಯೋಪಿಯಾ”.
ಪ್ರಸ್ತುತ ಡಾ. ನಮ್ರತಾ ಹೆಗಡೆ ಬೆಂಗಳೂರಿನ ಶಂಕರ ಕಾಲೇಜು ಆಫ್ ಓಪ್ಟೋಮೆಟ್ರಿ ಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಹಾಗೂ ವಿಭಾಗಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪೂರ್ಣಪ್ರಜ್ಞ ಎಂ.ಬಿ.ಎ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಮ್. ಆರ್. ಹೆಗಡೆ ಮತ್ತು ಕಮಲಾ ಎಮ್. ಹೆಗಡೆ ಅವರ ಪುತ್ರಿ. ಹಾಗೂ ಕುಮಟಾ ತಾಲೂಕಿನ ಹೊಲನಗದ್ದೆ ಮೂಲದ ಹರ್ಷ ಹೆಗಡೆಯವರ ಪತ್ನಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ