Business

*ಉದ್ಯಮಿ ಅದಾನಿಗೆ ಅರೆಸ್ಟ್ ವಾರೆಂಟ್: ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಭಾರಿ ಕುಸಿತ*

ಪ್ರಗತಿವಾಹಿನಿ ಸುದ್ದಿ: ಲಂಚ ಹಾಗೂ ವಂಚನೆ ಪ್ರಕರಣ ಸಂಬಂಧ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯೂಯಾರ್ಕ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿರುವ ಬೆನ್ನಲ್ಲೇ ಷೇರು ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದ್ದು, ಕುಸಿತಕಂಡಿದೆ.

ಭಾರತೀಯ ಷೇರು ಮಾರುಕಟ್ಟೆಯ ಬೆಳಗಿನ ವಹಿವಾಟಿನಲ್ಲಿ ಅದಾನಿ ಗ್ರೂಪ್ ನ ಷೇರುಗಳು ಭಾರಿ ಕುಸಿತಗೊಂಡಿವೆ. ಇಂದು ಒಂದೇ ದಿನದ ಸುಮಾರು 2.50 ಲಕ್ಷ ಕೊಟಿಯಷ್ಟು ನಷ್ಟ ಅನುಭವಿಸಿವೆ.

ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇಕಡಾ 22.99, ಅದಾನಿ ಪೋರ್ಟ್ಸ್ ಶೇಕಡಾ 20, ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇಕಡಾ 20, ಅದಾನಿ ಗ್ರೀನ್ ಎನರ್ಜಿ ಶೇಕಡಾ 19.53 ಮತ್ತು ಅದಾನಿ ಟೋಟಲ್ ಗ್ಯಾಸ್ ಶೇಕಡಾ 18.14 ರಷ್ಟು ಕುಸಿದಿವೆ.

ಇನ್ನು ಅದಾನಿ ಪವರ್ ಷೇರುಗಳು ಶೇಕಡಾ 17.79, ಅಂಬುಜಾ ಸಿಮೆಂಟ್ಸ್ ಶೇಕಡಾ 17.59, ಎಸಿಸಿ ಶೇಕಡಾ 14.54, ಎನ್ ಡಿಟಿವಿ ಶೇಕಡಾ 14.37 ಮತ್ತು ಅದಾನಿ ವಿಲ್ಮಾರ್ ಶೇಕಡಾ 10 ರಷ್ಟು ಕುಸಿದಿವೆ.

ಅದಾನಿ ಸಮೂಹದ ಕೆಲ ಕಂಪನಿಯ ಷೇರುಗಳು ದಿನದ ಅತ್ಯಂತ ಕಡಿಮೆ ವ್ಯಾಪಾರ ಅನುಮತಿಯ ಮಿತಿಯನ್ನು ತಲುಪಿದವು. ಎಲ್ಲಾ ಹತ್ತು ಲಿಸ್ಟೆಡ್ ಗ್ರೂಪ್ ಸಂಸ್ಥೆಗಳ ಸಂಯೋಜಿತ ಮಾರುಕಟ್ಟೆ ಬಂಡವಾಳೀಕರಣ (ಎಂಸಿಎಪಿ) ಬೆಳಗ್ಗಿನ ವಹಿವಾಟಿನಲ್ಲಿ ವ್ಯವಹಾರಗಳಲ್ಲಿ 2,45,016.51 ಕೋಟಿ ರೂ.ಗಳಷ್ಟು ಕುಸಿದಿದೆ.

ಈಕ್ವಿಟಿ ಮಾರುಕಟ್ಟೆಯಲ್ಲಿ, ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 536.89 ಪಾಯಿಂಟ್ಸ್ ಕುಸಿದು 77,041.49 ರಲ್ಲಿ ವಹಿವಾಟು ನಡೆಸುತ್ತಿದೆ ಮತ್ತು ಎನ್ಎಸ್ಇ ನಿಫ್ಟಿ 186.75 ಪಾಯಿಂಟ್ಸ್ ಕುಸಿದು 23,331.75 ರಲ್ಲಿ ವಹಿವಾಟು ನಡೆಸುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button