Belagavi NewsBelgaum NewsKarnataka News

*ನ.25ಕ್ಕೆ ಉಗರಗೊಳದಲ್ಲಿ ಶಿವಪ್ಪಯ್ಯ ಶಿವಯೋಗಿಗಳ ಜಾತ್ರೆ*

ಪ್ರಗತಿವಾಹಿನಿ ಸುದ್ದಿ: ಧಾರವಾಡ ನಗರದಿಂದ ಸುಮಾರು 40 ಕಿ.ಮೀ. ಅಂತರದಲ್ಲಿರುವ ಸವದತ್ತಿ ತಾಲೂಕು ಉಗರಗೋಳ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರ (ನ.25 ರಂದು) ಜರುಗಲಿದೆ.

ಅಂದು ಪ್ರಾತಃಕಾಲದಲ್ಲಿ ಶ್ರೀಗುರು ಶಿವಪ್ಪಯ್ಯ ಶಿವಯೋಗಳವರ ಕರ್ತೃ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಪುಷ್ಪಾಲಂಕಾರದ ವಿಶೇಷ ಪೂಜೆ ಜರುಗುವುದು. ನಂತರ ಮುಂಜಾನೆ 9 ಗಂಟೆಗೆ ಶ್ರೀಮಠದಿಂದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವವು ನಡೆಯಲಿದ್ದು, ನಂತರ ಮಹಾಪ್ರಸಾದದ ದಾಸೋಹ ಹಮ್ಮಿಕೊಳ್ಳಲಾಗಿದೆ.

ಲಕ್ಷ ದೀಪೋತ್ಸವ: ಅದೇ ದಿನ ಸಂಜೆ 5-30 ಗಂಟೆಗೆ ನಡೆಯುವ ಧರ್ಮ ಜಾಗೃತಿ ಸಮಾರಂಭಲ್ಲಿ ಹೂಲಿ ಸಾಂಬಯ್ಯನವರಮಠದ ಶ್ರೀಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಗರಗೋಳ ನಿರ್ವಾಣೇಶ್ವರಮಠದ ಶ್ರೀಮಹಾಂತ ಸ್ವಾಮೀಜಿ ಮತ್ತು ರಾಮಾರೂಢಮಠದ ಶ್ರೀಬ್ರಹ್ಮಾರೂಢ ಸ್ವಾಮೀಜಿ ಪಾಲ್ಗೊಳ್ಳುತ್ತಿದ್ದು, ಸವದತ್ತಿ ಶಾಸಕ ವಿಶ್ವಾಸ ವೈದ್ಯ ಲಕ್ಷ ದೀಪೋತ್ಸವ ಉದ್ಘಾಟಿಸುವರು. ಧಾರವಾಡದ ನಿವೃತ್ತ ಎ.ಸಿ.ಪಿ. ಜಿ.ಆರ್. ಹಿರೇಮಠ ಅಧ್ಯಕ್ಷತೆವಹಿಸುವರು.

ಸವದತ್ತಿ ತಹಶೀಲದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿನಮಠ, ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಪಿ. ಬಿ. ಮಹೇಶ್, ಮೈತ್ರಾದೇವಿ ವಸ್ತ್ರದ, ಮಂಜುನಾಥ ಕಾಳಪ್ಪನವರ, ರೇಣವ್ವ ಸಿದ್ದಕ್ಕನವರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಹುಬ್ಬಳ್ಳಿ-ಧಾರವಾಡ, ಸವದತ್ತಿ, ಉಗರಗೋಳ, ಹರ್ಲಾಪೂರ, ಹಂಚಿನಾಳ, ಮುನವಳ್ಳಿ ಗ್ರಾಮಗಳ ವಿವಿಧ ಕ್ಷೇತ್ರಗಳ ಗಣ್ಯರು, ರೈತ ನಾಯಕರು, ಯುವ ಧುರೀಣರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಗುರುರಕ್ಷೆ ಗೌರವ: ಜಾತ್ರೆಯ ಅಂಗವಾಗಿ ವಿವಿಧ ಸಾಧಕರಿಗೆ, ವಿದ್ಯಾರ್ಥಿಗಳಿಗೆ, ಗಣ್ಯರಿಗೆ ಶ್ರೀಮಠದ ವತಿಯಿಂದ ಗುರುರಕ್ಷೆಯ ಗೌರವ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳಿಂದ ಹಾಗೂ ಹಿಂದೂಸ್ತಾನಿ ಗಾಯಕ ಡಾ. ಅರ್ಜುನ ವಠಾರ ಮತ್ತು ಇತರೇ ಕಲಾವಿದರಿಂದ  ಸಂಗೀತ ಕಾರ್ಯಕ್ರಮಗಳು ಜರುಗಲಿದ್ದು, ಸಮಸ್ತ ಭಕ್ತಗಣ ಪಾಲ್ಗೊಳ್ಳುವಂತೆ ಶ್ರೀಮಠದ ಆಡಳಿತ ಮಂಡಳಿಯ ಸಿ.ಇ.ಓ., ನಿವೃತ್ತ ಕೆ.ಎ.ಎಸ್. ಅಧಿಕಾರಿ ಎಂ. ಆರ್. ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button