ಪ್ರಗತಿವಾಹಿನಿ ಸುದ್ದಿ: ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಮೈತ್ರಿಕೂಟ ಮಹಾಯುತಿ ಮೇಲುಗೈ ಸಾಧಿಸಿದೆ. 288 ಕ್ಷೇತ್ರಗಳ ಪೈಕಿ ಸುಲಭವಾಗಿ 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ಕೂಟ ತನ್ನ ಗೆಲುವನ್ನು ಖಚಿತಪಡಿಸಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ ಯುಬಿಟಿ ಮುಖಂಡ ಸಂಜಯ್ ರಾವತ್ ಇದು ಮಹಾರಾಷ್ಟ್ರದ ಜನರ ಗೆಲುವಲ್ಲ ಎಂದು ಕಿಡಿ ಕಾರಿದ್ದಾರೆ. ಮರಾಠಿಗರ ಮನಸ್ಥಿತಿ ಏನೆಂದು ನನಗೆ ಚೆನ್ನಾಗಿ ಗೊತ್ತಿದೆ. ಅವರು ಬಿಜೆಪಿಗೆ ಮತ ನೀಡಲು ಸಾಧ್ಯವೇ ಇಲ್ಲ ಎಂದು ಫಲಿತಾಂಶದ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೀಡಿದ ಲಾಡ್ಲಿ ಬೆಹನ್ ಯೋಜನೆ ನಿಮಗೆ ಮುಳುವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಲಾಡ್ಲಿ ಬೆಹನ್ ಮಾತ್ರವಲ್ಲ ಲಾಡ್ಲಿ ಭಾಯಿ, ಲಾಡ್ಲಿ ಬೇಟಾ, ಲಾಡ್ಲಿ ಕಾಕಾಗಳೂ ಇದ್ದಾರೆ. ಅವರೆಲ್ಲರೂ ಬಿಜೆಪಿಗೆ ಮತ ಹಾಕಿರಲು ಸಾಧ್ಯವೇ ಎಂದು ಸಂಜಯ್ ರಾವುತ್ ಗುಡುಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ