National

*ಆಂಬುಲೆನ್ಸ್ ನಲ್ಲಿಯೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಆಂಬುಲೆನ್ಸ್ ನಲ್ಲಿ ನಲ್ಲಿಯೇ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘೋರ ಘಟನೆ ಮಧ್ಯಪ್ರದೇಶದ ಮೌಗಂಜ್ ನಲ್ಲಿ ನಡೆದಿದೆ.

ನಾಲ್ವರು ಆರೋಪಿಗಳು ಬಾಲಕಿ ಮೇಲೆ ಚಲಿಸುತ್ತಿದ್ದ ಆಂಬುಲೆನ್ಸ್ ನಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಪ್ರಕರಣ ಸಂಬಂಧ ಆಂಬುಲೆನ್ಸ್ ಚಾಲಕ ಹಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವೀರೇಂದ್ರ ಚತುರ್ವೇದಿ ಹಾಗೂ ರಾಜೇಶ್ ಕೇವತ್ ಎಂದು ಗುರುತಿಸಲಾಗಿದೆ. ಅಪ್ರಾಪ್ತೆ ತನ್ನ ಸಹೋದರಿ ಹಾಗೂ ಮಾವನ ಜೊತೆ ಆಂಬುಲೆನ್ಸ್ ನಲ್ಲಿ ತೆರಳುತ್ತಿದ್ದಳು. ಈ ವೇಳೆ ಆಂಬುಲೆನ್ಸ್ ಚಾಲಕ ಹಾಗೂ ಆತನ ಮೂವರು ಸ್ನೇಹಿತರು ಆಂಬುಲೆನ್ಸ್ ನಲ್ಲಿದ್ದರು. ಮಾರ್ಗ ಮಧ್ಯೆಯೇ ಬಾಲಕಿ ಸಹೋದರಿ ಹಾಗೂ ಮಾವ ನೀರು ತರಲೆಂದು ಕೆಳಗಿಳಿದು ಹೋಗಿದ್ದರು. ಈ ವೇಳೆ ಅವರು ವಾಪಾಸ್ ಬರುವುದನ್ನೂ ಕಾಯದೇ ಆಮ್ಬುಲೆನ್ಸ್ ಚಲಾಯಿಸಿಕೊಂಡು ಹೋದ ಚಾಲಕನ ಸ್ನೇಹಿತ ರಾಜೇಶ್ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಅಂದು ರಾತ್ರಿ ಬಾಲಕಿಯನ್ನು ಆಂಬುಲೆನ್ಸ್ ನಲ್ಲೇ ಉಳಿಸಿಕೊಂಡು ಮರುದಿನ ಬೆಳಿಕ್ಕೆ ರಸ್ತೆ ಬದಿ ಬಲಕಿಯನ್ನು ಬಿಸಾಕಿ ಹೋಗಿದ್ದಾರೆ. ಮನೆಗೆ ಬಂದ ಬಾಲಕಿ ತಾಯಿಗೆ ವಿಷಯ ತಿಳಿಸಿದ್ದಾಳೆ. ನ.25ರಂದು ಸಂತ್ರಸ್ತೆ ಹಾಗೂ ಆಕೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button