*ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಪೊಲೀಸ್ ಠಾಣೆಯಲ್ಲಿಯೇ ಬೆಳಗಾವಿ ಪೊಲೀಸರಿಂದ ರಣಚಂಡಿಕಾ ಹೋಮ…ದೇವರ ಮೊರೆಹೋದ ಆರಕ್ಷಕರು*
ಪ್ರಗತಿವಾಹಿನಿ ಸುದ್ದಿ: ಅಪರಾಧ ಚಟುವಟಿಕೆಗಳು ನಿಯಂತ್ರಣಕ್ಕೆ ಬರಿ ಎಂದು ಪೊಲೀಸರೇ ದೇವರ ಮೊರೆ ಹೋಗಿದ್ದು, ಪೊಲೀಸ್ ಠಾಣೆಯಲ್ಲಿಯೇ ರಣಚಂಡಿಕಾ ಹೋಮ ನೆತವೇರಿಸಿರುವ ವಿಚಿತ್ರ ಘಟನೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪೊಲಿಸರು ಪೊಲೀಸ್ ಠಾಣೆಯಲ್ಲಿ ಹೋಮ, ವಿಶೇಷ ಪೂಜೆ ನೆರವೇರಿಸಿರುವ ಈ ಕ್ರಮ ಚರ್ಚೆಗೆ ಕಾರಣವಾಗಿದೆ. ಪೊಲೀಸರೇ ಮೂಢನಂಬಿಕೆಗಳಿಗೆ ಶರಣಾದರೆ ಹೇಗೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.
ಬೆಳಗಾವಿಯ ಮಳಮಾರುತಿ ಪೊಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಅತಿ ಹೆಚ್ಚು ಅಪರಾಧ ಪ್ರಕರಣ ದಖಲಾಗಿದೆಯಂತೆ. ಅಪರಾಧ ಕೃತ್ಯ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿದ್ದಾಗ್ಯೂ ಯಾವ ಪ್ರಯೋಜನವಾಗುತ್ತಿಲ್ಲ. ಇದರಿಂದ ಠಾಣಾಧಿಕಾರಿ ಜೆ.ಎಂ.ಖಾಲಿಮಿರ್ಚಿ ದೇವರ ಮೊರೆ ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ರಣಚಂಡಿಕಾ ಹೋಮ ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಳಮಾರುತಿ ಠಾಣೆಯ ಹಾಲ್ ನಲ್ಲಿಯೇ ಹೋಮ ಮಾಡಲಾಗಿದೆ. ಠಾಣೆಯ ಬಾಗಿಲಿಗೆ ಅರಿಷಿಣ-ಕುಂಕುಮವಿಟ್ಟು, ಕುಂಬಳಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಗಿದೆ. ಅಪರಾಧ ಕೃತ್ಯಗಳು ನಿಯಂತಣಕ್ಕೆ ಬರಲಿ, ಪೊಲೀಸ್ ಠಾಣೆಯಲ್ಲಿ ಶಾಂತಿ ನೆಲೆಸಲಿ ಎಂದು ಪೊಲೀಸರು ಪ್ರಾರ್ಥಿಸಿದ್ದಾರೆ. ಮಾಳಮಾರುತಿ ಠಾಣೆಯ ಪೊಲೀಸರ ಈ ಪ್ರಸಂಗ ಅಚ್ಚರಿಗೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ