Belagavi NewsBelgaum NewsKarnataka News

*ತನಗಿಂತ ಹಿರಿಯ ಮಹಿಳಾ ಹೋರಾಟಗಾರ್ತಿಯೊಂದಿಗೆ ಯೋಧನ ಪ್ರೀತಿ-ಪ್ರೇಮ: ಮದುವೆನಾಟಕವಾಡಿ ಮೋಸ: ಮನೆ ಮುಂದೆ ಧರಣಿ ಕುಳಿತ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಹೋರಾಟಗಾರ್ತಿಗೆ ಯೋಧನೊಬ್ಬನಿಂದ ಲವ್ ಸೆಕ್ಸ್ ದೋಖಾ ಆಗಿರುವ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

ಬೆಳಗಾವಿಯ ಮಚ್ಚೆ ಗ್ರಾಮದ ಪ್ರಮೋದಾ ಹಜಾರೆ ಎಂಬ ಮಹಿಳಾ ಹೋರಾಟಗಾರ್ತಿಗೆ ಬಿಜಗರ್ಣಿ ಗ್ರಾಮದ ಅಕ್ಷಯ್ ನಲವಡೆ ಎಂಬ ಯೋಧ ಪ್ರೀತಿಸಿ ವಿವಾಹವಾಗಿ, ಮೋಸ ಮಾಡಿದ್ದು, ನೊಂದ ಮಹಿಳೆ ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಧರಣಿ ಕುಳಿತಿದ್ದಾರೆ.

6 ವರ್ಷಗಳ ಹಿಂದೆ ಫೇಸ್ ಬುಕ್ ಮೂಲಕ ಅಕ್ಷಯ್ ನಲವಡೆ, ಪ್ರಮೋದಾ ಹಜಾರೆಗೆ ಪರಿಚಯವಾಗಿದ್ದು, ತನಗಿಂತ 14 ವರ್ಷ ಹಿರಿಯಳಾದರೂ ಆಕೆಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ಹೇಳಿದ್ದ. 6 ವರ್ಷಗಳ ಹಿಂದೆ ಅವರದ್ದೇ ಮನೆಯ ದೇವರ ಕೋಣೆಯಲ್ಲಿ ಅಕ್ಷಯ್ ನಲವಡೆ ಪ್ರಮೋದಾಳನ್ನು ವಿವಾಹವಾಗಿದ್ದ. ವಿಷಯ ಅಕ್ಷಯ್ ಮನೆಯವರಿಗೂ ತಿಳಿದಿತ್ತು. ರಜೆ ಮೇಲೆ ಊರಿಗೆ ಬಂದಾಗ 15 ದಿನಗಳ ಕಾಲ ಪ್ರಮೋದಾ ಮನೆಯಲ್ಲಿಯೇ ಉಳಿಯುತ್ತಿದ್ದ.

ಹೀಗಿರುವಾಗ ಒಂದು ದಿನ ಪ್ರಮೋದಾ ಹಜಾರೆಗೆ ಅಕ್ಷಯ್ 9 ಯುವತಿಯರ ಜೊತೆ ಇರುವುದು ಗೊತ್ತಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಎಲ್ಲರನ್ನೂ ಬಿಟ್ಟು ಬಿಡುತ್ತೇನೆ. ನಿನ್ನ ಜೊತೆಯೇ ಇರುವುದಾಗಿ ಹೇಳಿ ನಂಬಿಸಿದ್ದ. ಆದರೆ ಮೊನ್ನೆ ರಜೆ ಮೇಲೆ ಬಂದ ಅಕ್ಷಯ್ ಬೇರೊಂದು ಯುವತಿ ಜೊತೆ ನಿಶ್ಚಿತಾರ್ಥವಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪ್ರಮೋದಾ, ಅಕ್ಷಯ್ ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಈ ವೇಳೆ ಊರಿನ ಹಿರಿಯರು, ಕುಟುಂಬದವರು ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿ ಆಕೆಯನ್ನು ಕಳುಸಿದ್ದರು. ಬಳಿಕ ನಿಶ್ಚಿತಾರ್ಥವಾಗಿರುವ ಯುವತಿಯ ಮದುವೆಯಾಗಲ್ಲ ಎಂದು ಅಕ್ಷಯ್ ಪ್ರಮೋದಳಿಗೆ ಹೇಳಿದ್ದನಂತೆ. ಆದರೆ ಇಂದು ಅಕ್ಷಯ್ ವಿವಾಹವಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪ್ರಮೋದಾ ಆತನ ಮನೆ ಬಳಿ ಹೋಗಿ ನೋಡಿದರೆ ಅಕ್ಷಯ್ ಹಾಗೂ ಕುಟುಂಬದವರು ಮನೆಗೆ ಬೀಗ ಹಾಕಿ ತೆರಳಿದ್ದಾರೆ.

ಯೋಧನ ಮೋಸಕ್ಕೆ ಮನನೊಂದ ಸಂತ್ರಸ್ತೆ ಪ್ರಮೋದಾ, ಅಕ್ಷಯ್ ನಲವಡೆ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಯುವವರೆಗೂ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ. ಸಾಕಷ್ಟು ಮಹಿಳೆಯರಿಗೆ ತಾನು ನ್ಯಾಯಕೊಡಿಸಿದ್ದೇನೆ ಇಂದು ತನಗಾಗುತ್ತಿರುವ ಅನ್ಯಾಯದ ವಿರುದ್ಧ ತನ್ನ ನೆರವಿಗೆ ಬರುವಂತೆ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button