Belagavi NewsBelgaum NewsKannada NewsKarnataka NewsLatest

ಎಟಿಎಮ್‌ ಹಣ ಕಳ್ಳತನ ಮಾಡಿದ ಎಟಿಎಮ್ ಕೆಲಸಗಾರನ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಎಟಿಎಂ ನಿಂದ ಹಣ ಕದ್ದ ವ್ಯಕ್ತಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ: 30/11/2024 ರಂದು ಬೆಳಗಾವಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಳಗಾವಿ ಅಂಜುಮನ್ ಬಿಲ್ಡಿಂಗ್‌ ನಲ್ಲಿ ಬರುವ ಹೆಚ್.ಡಿ.ಎಫ್.ಸಿ, ಬ್ಯಾಂಕ ಎ.ಟಿ.ಎಮ್ ನಿಂದ 8,65.500 ರೂ. ವನ್ನು “ಎಸ್.ಐ.ಎಸ್” ಪ್ರೋಸಿಗರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್” ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರನಾದ ಕೃಷ್ಣಾ ಸುರೇಶ ದೇಸಾಯಿ, (ವಯಸ್ಸು: 23 ವರ್ಷ, ಸಾ: ಮನೆ ನಂ: 429, ಜ್ಯೋತಿ ನಗರ, ಕಂಗ್ರಾಳಿ ಕೆ.ಹೆಚ್. ಬೆಳಗಾವಿ ನಗರ) ಕಳ್ಳತನ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಎ.ಟಿ.ಎಮ್ ಕಾಂಬಿನೇಶನ ಪಾಸ್‌ವರ್ಡವನ್ನು ಉಪಯೋಗಿಸಿ ಹೆಚ್.ಡಿ.ಎಫ್.ಸಿ, ಎ.ಟಿ.ಎಮ್.ದಿಂದ ಹಣವನ್ನು ತೆಗೆದುಕೊಂಡು ಹೋದ ಬಗ್ಗೆ ಮಾರ್ಕೇಟ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 164/2024 ಕಲಂ: 306 ಬಿ.ಎನ್.ಎಸ್.- 2023 (ಹಳೆ ಕಲಂ: 381 ಐಪಿಸಿ) ನೇ ಪ್ರಕಾರ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಸಂತೋಷ ಸತ್ಯನಾಯಕ, ಎಸಿಪಿ, ಮಾರ್ಕೇಟ್ ಉಪವಿಭಾಗರವರ ಮಾರ್ಗದರ್ಶನದಲ್ಲಿ ಮಹಾಂತೇಶ ಧಾಮಣ್ಣವರ, ಪಿಐ, ಮಾರ್ಕೆಟ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ತಂಡ ಮಹಾಂತೇಶ ಮಠಪತಿ-ಪಿ.ಎಸ್.ಐ., ವಿಠಲ ಹಾವನ್ನವರ-ಪಿ.ಎಸ್.ಐ., ಹೆಚ್.ಎಲ್.ಕೆರೂರ-ಪಿ.ಎಸ್.ಐ, ಹಾಗೂ ಸಿಹೆಚ್.ಸಿ, ರವರುಗಳಾದ ಲಕ್ಷ್ಮಣ ಎಸ್.ಕಡೋಲ್ಕರ, ಶಂಕರ ಕುಗಟೊಳ್ಳಿ, ಐ.ಎಸ್.ಪಾಟೀಲ್, ನವೀನಕುಮಾರ, ಶಿವಪ್ಪ ತೇಲಿ, ರಮೇಶ ಅಕ್ಕಿ, ಹಾಗೂ ಸಿಪಿಸಿ ರವರುಗಳಾದ ಸುರೇಶ ಕಾಂಬಳೆ, ಕಾರ್ತಿಕ, ಎಮ್.ಬಿ.ವಡೆಯರ್, ಮಹಾದೇವ ಕಾಶೀದ, ಸಂಜು ಸಂಗೋಟಿ ಹೀಗೆ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಪತ್ತೆ ಕಾರ್ಯವನ್ನು ಕೈಗೊಂಡು ಆರೋಪಿತನಿಂದ ಎ.ಟಿ.ಎಮ್ ನಿಂದ ಹಣ ಕಳ್ಳತನವಾದ 5,74,000/-ರೂ. ಹಣ, ಕಳ್ಳತನ ಹಣದಿಂದ ಖರೀದಿ ಮಾಡಿದ ಬಂಗಾರದ ಆಭರಣ 1,56,000/-ರೂ ಮೌಲ್ಯದ ತೂಕ 20 ಗ್ರಾಂ, ಹೀಗೆ ಒಟ್ಟು 7.30.000/-ರೂ. ಕಿಮ್ಮತ್ತಿನ ಹಣ ಮತ್ತು ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಕೇಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button