Latest

ಮಕ್ಕಳ ಸಂತೆ, ಮಾದರಿ ನಲಿ-ಕಲಿ ತರಬೇತಿ ಉದ್ಘಾಟನೆ

 

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು
ಪಟ್ಟಣದ ಗುರುವಾರ ಪೇಠೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಹಾಗೂ ಮಾದರಿ ನಲಿ-ಕಲಿ ತರಬೇತಿಯನ್ನು ಪ್ರಾಥಮಿಕ ಶಿಕ್ಷಣ ನಿರ್ದೇಶಕ ಜಯಕುಮಾರ ಎಸ್. ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರಕಾರಿ ಶಾಲೆಯಗಳಲ್ಲಿ ಮಕ್ಕಳಿಗೆ ಸಂತೆಗಳ ಜ್ಞಾನಕ್ಕಾಗಿ ಈ ತರಹದ ಕಾರ್ಯಕ್ರಮಗಳನ್ನು ಜರುಗಿಸುವುದರಿಂದ ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚುತ್ತದೆ. ಇದೆ ರೀತಿ ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಪಾಠದ ಜೊತೆಗೆ ಇನ್ನೂ ಹೆಚ್ಚು ವ್ಯವಹಾರ ಜ್ಞಾನ ನೀಡಿದಲ್ಲಿ ಸರಕಾರಿ ಶಾಲೆಗಳ ಸಬಲಿಕರಣ ಪೂರ್ಣ ಪ್ರಮಾಣದಲ್ಲಿ ಸಾಧಿಸಲು ಸಾಧ್ಯವೆಂದು ಹೇಳಿದರು.
ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ, ಚನ್ನಮ್ಮ ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಾ ಬೆನಕಟ್ಟಿ, ಶ್ರೀದೇವಿ ನಾಗನೂರ, ಜಯಕುಮಾರ ಹೆಬ್ಬಳ್ಳಿ, ಶಿವಶಂಕರ ಹಾದಿಮನಿ, ಬಿ.ಆಯ್. ತುಬಾಕಿ, ಮಲ್ಲಿಕಾರ್ಜುನ ಶಿದ್ದನಗೌಡರ, ಎಮ್.ಎಸ್.ಕಲ್ಮಠ, ಕೆ.ಜಿ.ಗಡಾದ, ಬಿ.ಎ.ಗಡೆನ್ನವರ, ಐ.ಬಿ.ಉಪರಿ, ಪಿ.ಬಿ.ಲದ್ದಿಮಠ, ಚಂದ್ರಶೇಖರ ಶೀಗಿಹಳ್ಳಿ ಇದ್ದರು. ಎಸ್.ಎಮ್.ಪಾಶ್ಚಾಪುರ ನಿರೂಪಿಸಿದರು, ಎಮ್.ಎಫ್.ಜಕಾಂತಿ ಸ್ವಾಗತಿಸಿದರು. ಎಮ್.ಆರ್.ಪಾಟೀಲ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button