ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಇತ್ತೀಚಿನ ಮಳೆಯಿಂದಾಗಿ ತೆಗ್ಗು ಪ್ರದೇಶದಲ್ಲಿ ನೀರು ಶೇಖರಣೆಯಾಗಿ ನಿರ್ಮಾಣವಾಗಿದ್ದ ನೀರಿನ ಹೊಂಡದಲ್ಲಿ ತಾಲ್ಲೂಕಿನ ದೊಡ್ಡ ಹೊಸೂರು ಗ್ರಾಮದಲ್ಲಿ ಸೋಮವಾರ ಬಾಲಕಿಯೋರ್ವಳು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ.
ಮೃತ ಬಾಲಕಿಯನ್ನು ಚಿಕ್ಕೋಡಿ ತಾಲ್ಲೂಕು ಅಕ್ಕೋಳ ಗ್ರಾಮದ ಸಾವಕ್ಕ ಈರಪ್ಪ ಹೆಗರೆ (9)
ಎಂದು ಗುರುತಿಸಲಾಗಿದೆ. ಕುರಿಗಾಹಿ ಕುಟುಂಬಕ್ಕೆ ಸೇರಿದ ಸಾವಕ್ಕ ತನ್ನ ಹೆತ್ತವರ
ಜೊತೆ, ಕಳೆದ ಹಲವು ದಿನಗಳ ಹಿಂದೆ ತಾಲ್ಲೂಕಿನ ದೊಡ್ಡ ಹೊಸೂರು ಗ್ರಾಮದ ಸಮೀಪದ
ಹೊಲದಲ್ಲಿ ಕುರಿಗಳೊಂದಿಗೆ ತಂಗಿದ್ದರು. ಸೋಮವಾರ ಬಟ್ಟೆ ತೊಳೆಯಲು ನೀರಿನ ಹೊಂಡದ ಸಮೀಪ ತನ್ನ ತಾಯಿಯೊಂದಿಗೆ ತೆರಳಿದ್ದ ಸಾವಕ್ಕ ಕೊಡದಿಂದ ನೀರು ತುಂಬುವ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದಳು.

ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಮತ್ತು ಪೊಲೀಸರು ತೆರಳಿ ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪರಿಣಾಮ ಸೋಮವಾರ ಸಂಜೆ ಬಾಲಕಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಈ ಕುರಿತು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ