ಒಟ್ಟು RE ಸ್ಥಾಪಿತ ಸಾಮರ್ಥ್ಯ 213.70 GW; ಸೌರಶಕ್ತಿ ಶೇ.30.2ರಷ್ಟು ಬೆಳವಣಿಗೆ
ಪ್ರಗತಿವಾಹಿನಿ ಸುದ್ದಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ವಾರ್ಷಿಕ ಶೇ.14.2ರಷ್ಟು ಸಾಮರ್ಥ್ಯ ಸಾಧಿಸಿದೆ. 2023ರ ನವೆಂಬರ್ ನಿಂದ 2024ರ ನವೆಂಬರ್ ರವರೆಗೆ ಗಮನಾರ್ಹ ಪ್ರಗತಿ ಕಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಪಡಿಸಿದ ‘ಪಂಚಾಮೃತ’ ಗುರಿಗಳಿಗೆ ಅನುಗುಣವಾಗಿ ಬದ್ಧತೆ ತೋರಲಾಗಿದೆ ಎಂದು ಹೊಸ ಮತ್ತು
ನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪಳೆಯುಳಿಕೆ ರಹಿತ ಇಂಧನ ಸ್ಥಾಪಿತ ಸಾಮರ್ಥ್ಯ 213.70 GW ತಲುಪಿದೆ, ಇದು ಕಳೆದ ವರ್ಷದ 187.05 GW ಗಿಂತ ಶೇ.14.2ರಷ್ಟು ಹೆಚ್ಚಳವಾಗಿದೆ. ಈ ಮಧ್ಯೆ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವು 472.90 GW ಗೆ ಏರಿತು. ಹಿಂದಿನ ವರ್ಷದ 368.15 GW ಗಿಂತ ಗಣನೀಯ ಪ್ರಮಾಣದಲ್ಲಿ ಶೇ.28.5ರಷ್ಟು ಹೆಚ್ಚಳವಾಗಿದೆ.
2024-25ರ ಆರ್ಥಿಕ ವರ್ಷಾವಧಿಯಲ್ಲಿ ನವೆಂಬರ್ ಒಟ್ಟು 14.94 GW ಹೊಸ RE ಸಾಮರ್ಥ್ಯವಿದ್ದು, 23-24 ರಲ್ಲಿ ಅದೇ ಅವಧಿಯಲ್ಲಿ ಇದ್ದ 7.54 GW ದ್ವಿಗುಣಗೊಂಡಿದೆ. 566.06 MW ನಿಂದ ನಾಲ್ಕು ಪಟ್ಟು ಹೆಚ್ಚಳ ಕಂಡಿದೆ. ಹೀಗೆ ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರ ಎಲ್ಲಾ ಪ್ರಮುಖ ವರ್ಗಗಳಲ್ಲಿ ವ್ಯಾಪಕ ಬೆಳವಣಿಗೆ ಕಂಡಿದೆ.
ಸೌರ-ಪವನ ಶಕ್ತಿ ಗಮನಾರ್ಹ ಬೆಳವಣಿಗೆ: ಭಾರತ ಸೌರ ಮತ್ತು ಪವನ ಶಕ್ತಿ ಉತ್ಪಾದನೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. ಸೌರಶಕ್ತಿ ಮುನ್ನಡೆಯಲ್ಲಿದ್ದು, ಸ್ಥಾಪಿತ ಸಾಮರ್ಥ್ಯವು 2023ರಲ್ಲಿನ 72.31 GW ನಿಂದ 2024ರಲ್ಲಿ 94.17 GW ಗೆ ಏರಿದೆ. ಶೇ.30.2ರಷ್ಟು ಸದೃಢ ಬೆಳವಣಿಗೆಯಾಗಿದೆ. ಒಟ್ಟು ಸೌರ ಸಾಮರ್ಥ್ಯವು ಶೇ.52.7ರಷ್ಟು ಏರಿಕೆಯಾಗಿದೆ. 2023ರಲ್ಲಿ 171.10 GWಗೆ ಹೋಲಿಸಿದರೆ 2024 ರಲ್ಲಿ 261.15 GW ತಲುಪಿದೆ. ಪವನ ಶಕ್ತಿ ಸಹ ಗಮನಾರ್ಹ ಕೊಡುಗೆ ನೀಡಿದೆ. ಶೇ.17.4ರಷ್ಟು ಹೆಚ್ಚಾಗಿದೆ.
ಬಯೋ ಎನರ್ಜಿ ಸಾಮರ್ಥ್ಯ 2023ರಲ್ಲಿ 10.84 GW ನಿಂದ 2024 ರಲ್ಲಿ 11.34 GW ಗೆ ಏರಿದೆ. ಇದು 4.6%ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಸಣ್ಣ ಜಲ ವಿದ್ಯುತ್ ಯೋಜನೆಗಳೂ ತುಸು ಹೆಚ್ಚಳ ಕಂಡಿವೆ.
2023ರಲ್ಲಿ 4.99 GWಗೆ 2024 ರಲ್ಲಿ 5.08 GW, ಪೈಪ್ಲೈನ್ ಯೋಜನೆ ಸೇರಿದಂತೆ ಒಟ್ಟು ಸಾಮರ್ಥ್ಯ 5.54 GW ತಲುಪಿದೆ. 2023 ರಲ್ಲಿ 46.88 GW ನಿಂದ 46.97 GW ಗೆ 2024 ರಲ್ಲಿ 46.97 GW ಗೆ ಮತ್ತು ಪೈಪ್ಲೈನ್ ಯೋಜನೆ ಒಳಗೊಂಡಂತೆ ಒಟ್ಟು ಸಾಮರ್ಥ್ಯ ಕಳೆದ ವರ್ಷದ 64.85 GW ನಿಂದ 67.02 GW ಗೆ ಹೆಚ್ಚುವುದರೊಂದಿಗೆ ದೊಡ್ಡ ಜಲವಿದ್ಯುತ್ ಯೋಜನೆಗಳ ಕೊಡುಗೆಯೂ ಇದೆ.
ಪರಮಾಣು ಶಕ್ತಿ ಸ್ಥಿರ: ಪರಮಾಣು ಶಕ್ತಿಯಲ್ಲಿ, ಸ್ಥಾಪಿತ ಪರಮಾಣು ಸಾಮರ್ಥ್ಯವು 2023 ರಲ್ಲಿ 7.48 GW ನಿಂದ 2024 ರಲ್ಲಿ 8.18 GW ಗೆ ಬೆಳೆದಿದೆ. ಆದರೆ ಪೈಪ್ಲೈನ್ ಯೋಜನೆ ಸೇರಿದಂತೆ ಒಟ್ಟು ಸಾಮರ್ಥ್ಯ 22.48GW ನಲ್ಲಿ ಸ್ಥಿರವಾಗಿದೆ.
ಇಂಧನ ಭದ್ರತೆಗೆ ಸಚಿವ ಪ್ರಲ್ಹಾದ ಜೋಶಿ ಒತ್ತಾಸೆ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರ ಒತ್ತಾಸೆಯಂತೆ MNRE ಇಂಧನ ಭದ್ರತೆಯನ್ನು ಬಲಪಡಿಸುವಲ್ಲಿ ದಿಟ್ಟ ಹೆಜ್ಜೆ ಇರಿಸಿದೆ. ಇದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ