Belagavi NewsBelgaum NewsPolitics

*ಬೆಳಗಾವಿಗೆ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಆಗಮನ: ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: 1924ರ ಬೆಳಗಾವಿ ಎಐಸಿಸಿ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆಗಮಿಸಿ ಬೆಳಗಾವಿಯಲ್ಲೆ ಇರಲಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ಬೆಳಗಾವಿಯಲ್ಲಿ ಕಾಂಗ್ರೇಸ್ ಅಧಿವೇಶನ ನಡೆದು ನೂರು ವರ್ಷ ಪೂರೈಸಿದ ಹಿನ್ನೆಲೆ ಸತಮಾನೋತ್ಸವ ಸಮಾರಂಭದ ಪೂರ್ವ ಭಾವಿ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿ‌ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ಗಾಂಧಿ ಬಾವಿಯಲ್ಲಿ ನೀರು ತಂದು ಚಲ್ಲಿ ಗೃಹಜ್ಯೋತಿ ಘೋಷಣೆ ಮಾಡಿದ್ದೆವು. ನೂರು ವರ್ಷದ ಇತಿಹಾಸಕ್ಕೆ ಈ ಸಮಾವೇಶ ಸಾಕ್ಷಿಯಾಗಲಿದೆ. 150 ಜನ ಎಂಪಿಗಳು 40 ಬಿಸಿಸಿ ಅಧ್ಯಕ್ಷರುಗಳು, ಕಾಂಗ್ರೆಸ್ ಸದಸ್ಯರು ಸಿಎಂಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 26 ರಂದು ಕಾರ್ಯಕಾರಿ ಸಮಿತಿಯ ಸಭೆ ಇರುತ್ತೆ. ಮಾರನೇ ದಿನ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಇದೆ. ನಿಂತವರು ಗೆದ್ದವರು ಸೋತವರು ಎಲ್ಲರೂ ಸಹ ಸೇರಲಿದ್ದಾರೆ. ಸಿಪಿಎಡ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ನೂರು ಕಡೆ ಕಾಂಗ್ರೇಸ್ ಕಚೇರಿಯನ್ನು ಉದ್ಘಾಟನೆ ಮಾಡಬೇಕು ಎಂದು ಸಿದ್ಧತೆ ಆಗಿದೆ. ಸೋಮವಾರ ಅಥವಾ ಮಂಗಳವಾರ ವೇಣುಗೋಪಾಲ್ ಹಾಗೂ ಸುರ್ಜೇವಾಲ ಬಂದು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಒಬ್ಬೊಬ್ಬ ಶಾಸಕರಿಗೂ ಸಹ ಒಬ್ಬೊಬ್ಬ ನಾಯಕರನ್ನು ಕರೆದುಕೊಂಡು ಬರುವ ಜವಾಬ್ದಾರಿ ನೀಡಲಾಗಿದೆ ಎಂದರು.

ಮೈಸೂರು ದಸರಾ ಯಾವ ರೀತಿ ವಿಜೃಂಭಿಸುತ್ತೊ ಅದೇ ರೀತಿ ಲೈಟಿಂಗ್ ಅರೆಂಜ್ ಮಾಡಲಾಗಿದೆ. ಒಂದು ವಾರಗಳ ಕಾಲ ಲೈಟಿಂಗ್ ವ್ಯವಸ್ಥೆಯನ್ನು ಇಡುತ್ತೇವೆ. ಜನ ಬಂದು ನೋಡಿಕೊಂಡು ಹೋಗಬಹುದು. ಒಂದು ಕಡೆ ಸರ್ಕಾರ ಇನ್ನೊಂದು ಕಡೆ ಪಕ್ಷವೂ ಕೆಲಸ ಮಾಡುತ್ತೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button