ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ನ್ಯೂ ವೈಭವ ನಗರದಲ್ಲಿ ತಡರಾತ್ರಿ ಎರಡು ಮನೆಗಳಿಗೆ ಕನ್ನ ಹಾಕಿರುವ ಖದಿಮರು ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ.
ತಡರಾತ್ರಿ ಕೃಷ್ಣಪ್ಪ ಕಡೂರ ಹಾಗೂ ಶಭಾನಾ ಮೂಲ್ಲಾ ಎಂಬುವರಿಗೆ ಸೇರಿದ ಮೆನೆಯ ಕೀಲಿ ಮುರಿದು ಕಳ್ಳತನ ಮಾಡಲಾಗಿದೆ. ಈ ಎರಡು ಮನೆಯವರು ತಮ್ಮ ಸಂಬಂಧಿಕರ ಮನೆಗೆ ಹೊಗಿದ್ದು, ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಕೃಷ್ಣಪ್ಪ ಕಡೂರ ಎಂಬುವರ ಮಯಲ್ಲಿ 14 ಸಾವಿರ ನಗದು ಹಾಗೂ ಸುಮಾರು 30 ಗ್ರಾಮ ಚಿನ್ನ ಕಳ್ಳತನವಾಗಿದೆ. ಶಭಾನಾ ಮೂಲ್ಲಾ ಎಂಬುವರ ಮನೆಯಲ್ಲಿ 10 ಸಾವಿರ ನಗದು ಕಳ್ಳತನ ಮಾಡಲಾಗಿದೆ.
ಮನೆಯ ಬಾಗಿಲಿಗೆ ಹಾಕಿದ್ದ ಕೀಲಿ ಹಾಗೂ ಮನೆಯ ವಳಗಡೆ ಟ್ರೇಸರಿ ಮುರಿದು ಕಳ್ಳತನ ಮಾಡಲಾಗಿದೆ. ಕಳ್ಳತನವಾದ ಎರಡು ಮನೆಗೆ ಶ್ವಾನ ದಳ ಹಾಗೂ ಬೆರಳೆಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಉಸ್ಮಾನ ಅವಟಿ, ಪಿಎಸ್ಐ ಸಂತೋಷ ದಳವಾಯಿ ಹಾಗೂ ದಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ