Belagavi NewsBelgaum NewsKarnataka News

*ಎಂಎಲ್‌ಐಆರ್‌ಸಿಯಲ್ಲಿ ಮಾಜಿ ಸೈನಿಕರಿಗಾಗಿ ಮೇಳ ಆಯೋಜನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟನಲ್ಲಿ ಮಾಜಿ ಸೈನಿಕರಿಗೆ ಒಂದೇ ಸೂರಿನಡಿ ಪಿಂಚಣಿ, ಬ್ಯಾಂಕಿಂಗ್ ಮತ್ತು ದಾಖಲಾತಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಮೇಳ ಆಯೋಜನೆ ಮಾಡಲಾಗಿತ್ತು

ಇಂದು ಬೆಳಗಾವಿಯ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ  ಈ ಮೇಳ ನಡೆಸಲಾಯಿತು.ಪಿಸಿಡಿಎ ಪ್ರಯಾಗ್ರಾಜ್, ಪಿಸಿಡಿಎ ಬೆಂಗಳೂರು, ಪಿಎಒ ದಿ ಮರಾಠ ಎಲ್ಐ, ಸಿಪಿಪಿಸಿ ಬೆಂಗಳೂರು, ಝಡ್‌ಎಸ್‌ಡಬ್ಲ್ಯೂಒ, ಬೆಳಗಾವಿ, ಧಾರವಾಡ, ಬಿಜಾಪುರ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್, ಪೊಲೀಸ್ ಮತ್ತು ಐಡಿಎಫ್‌ಸಿ ಬ್ಯಾಂಕ್ ಪ್ರತಿನಿಧಿಗಳೊಂದಿಗೆ ಇಎಸ್‌ಎಂ ಮೇಳೆ ನಡೆಯಿತು. 

ಈ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಅಕ್ಕಪಕ್ಕದ ಪ್ರದೇಶಗಳಿಂದ ಸುಮಾರು 1485 ಯೋಧರು ಮತ್ತು ವೀರ ನಾರಿಗಳು ಭಾಗವಹಿಸಿದ್ದರು. ಮರಾಠಾ ಲಘು ಪದಾತಿದಳದ ರೆಜಿಮೆಂಟಲ್‌ ಸೆಂಟರ್‌ನ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಮೇಳದ ಅಧ್ಯಕ್ಷತೆಯನ್ನು ಮರಾಠ ಲೈಟ್‌ ಇನ್‌ಫೆಂಟ್ರಿ ರೆಜಿಮೆಂಟಲ್‌ ಸೆಂಟರ್‌ ಸ್ಟೇಷನ್‌ ಕಮಾಂಡರ್‌ ಹಾಗೂ ಕಮಾಂಡೆಂಟ್‌ ಬ್ರಿಗೇಡಿಯರ್‌ ಜೋಯ್‌ದೀಪ್‌ ಮುಖರ್ಜಿ ವಹಿಸಿದ್ದರು.

ಪಿಂಚಣಿ ಸಂಬಂಧಿತ ಕುಂದುಕೊರತೆಗಳ ಪರಿಹಾರಕ್ಕಾಗಿ, ವಿವಿಧ ಶಸ್ತ್ರಾಸ್ತ್ರ ಮತ್ತು ಸೇವೆಗಳ ದಾಖಲೆ ಕಚೇರಿಗಳ ಕೌಂಟರ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಕಂಟೋನ್ಮೆಂಟ್ ಬೋರ್ಡ್ ಆಸ್ಪತ್ರೆ, ಮಿಲಿಟರಿ ಆಸ್ಪತ್ರೆ, ಬೆಳಗಾವಿ, ಮಿಲಿಟರಿ ಡೆಂಟಲ್ ಸೆಂಟರ್, ಬೆಳಗಾವಿ ಮತ್ತು ECHS ಪಾಲಿ ಕ್ಲಿನಿಕ್ ಬೆಳಗಾವಿಯ ಸಕ್ರಿಯ ಬೆಂಬಲದೊಂದಿಗೆ ವೈದ್ಯಕೀಯ ಶಿಬಿರವನ್ನು ಸಹ ಆಯೋಜಿಸಲಾಗಿದೆ, ಇದು ವೀರ್ ನಾರಿಯರ, ESM, ಯುದ್ಧ ವಿಷೇಶ ಚೇತನರ ಸೈನಿಕರಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ಒದಗಿಸಿತು.

ಸೈನಿಕರ ಸೇವೆ ಮತ್ತು ಅತ್ಯುನ್ನತ ತ್ಯಾಗವನ್ನು ಗುರುತಿಸಿ, ಒಟ್ಟು 30 ವೀರ ನಾರಿಗಳು ಮತ್ತು 5 ಯುದ್ಧ ವಿಶೇಷ ಚೇತನ ಸೈನಿಕರನ್ನು ಬ್ರಿಗ್ ಜೋಯ್‌ಡಿಪ್ ಮುಖರ್ಜಿ ಅವರು ಗೌರವಿಸಿದರು.  ಯುದ್ಧದ ವಿಶೇಷ ಚೇತನ ಸೈನಿಕರಿಗೆ ಹೀರೋ ಮೋಟಾರ್ಸ್ ಹಾಗೂ ವಾರ್ ವುಂಡೆಡ್‌ನ ದಕ್ಷಿಣ ಪ್ರಾದೇಶಿಕ ಮುಖ್ಯಸ್ಥ ಬ್ರಿಗ್ ಸಂದೀಪ್ ಸಿ ಅವರು ಜೀವ ಪೋಷಕ ಉಪಕರಣಗಳು ಮತ್ತು ಆರ್ಥಿಕ ನೆರವು ನೀಡಿ ಗೌರವಿಸಿದರು.

 


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button