Kannada NewsKarnataka NewsLatest

*BREAKING: ಭೀಕರ ಅಪಘಾತ: ಇಬ್ಬರು ಬೈಕ್ ಸವಾರರು, ಓರ್ವ ಪಾದಚಾರಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲಿ ನಡೆದಿದೆ.

ಇಲ್ಲಿನ ಮುಗಳಖೇಡ ಕ್ರಾಸ್ ನಲ್ಲಿ ಬೈಕ್ ಹಾಗೂ ಪಾದಚಾರಿಯೊಬ್ಬರಿಗೆ ಕಾರು ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿದ್ದ ಇಬ್ಬರು ಹಾಗೂ ಓರ್ವ ಪಾದಚಾರಿ ಮೃತಪಟ್ಟಿದ್ದಾರೆ.

Home add -Advt

ಗಣಪತಿ ಬತ್ತಿ (42), ತಪನ್ ಕುಮಾರ್ ದಲಾಯಿ (46) ಹಾಗೂ ಮತ್ತೋರ್ವ ವ್ಯಕ್ತಿ ಮೃತರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತರ ಗುರುತು ಪತ್ತೆ ಮಾಡುತ್ತಿದ್ದಾರೆ.

ಕಾರು ಚಾಲಕ ಸುಭಾಷ್ ರಾಮತೀರ್ಥ ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


Related Articles

Back to top button