ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೂ ಕರ್ನಾಟಕದ ಶಾಲೆಗಳಿಗೆ ನೀಡುತ್ತಿರುವ ಯೋಜನೆಗಳನ್ನು ವಿಸ್ತರಿಸುವ ಬಗ್ಗೆ ತಜ್ಞರ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತಾಡಿದ ಅವರು ಮಹಾರಾಷ್ಟ್ರ ಸರ್ಕಾರ ಇದನ್ನು ಮಾಡಿದರೆ ಒಳ್ಳೆಯದು. ನಾವು ಒಬ್ಬರಿಗೆ ಕೊಡೋದು ಎಷ್ಟು ಸರಿ ಎನ್ನುವುದು ಯೋಚಿಸಿ ನೋಡಬೇಕು. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವೆ. ಮಕ್ಕಳಿಗೆ ಶೂಗಳನ್ನು ಕೊಡುವುದು ಒಳ್ಳೆಯದು. ನಮ್ಮಿಂದ ಏನೂ ತೊಂದರೆಯಾಗುವುದಿಲ್ಲ ಅಂತಾದರೆ ನಾವು ಆ ಮಕ್ಕಳಿಗೆ ಶೂ ಹಾಗೂ ವಿವಿಧ ಯೋಜನೆಗಳನ್ನು ವಿತರಣೆ ಮಾಡುತ್ತೇವೆ ಎಂದರು.
ವಿಜಯೇಂದ್ರ ಅವರಿಗೆ ಸಿಬಿಐ ಜೊತೆಗೆ ಅಡ್ಡಸ್ಟ್ಮೆಂಟಿಗೆ ಸರಿಯಾಗಿತ್ತು. ಹೀಗಾಗಿ ಅದೇ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸಿಬಿಐ ತನಿಖಾ ಸಂಸ್ಥೆಗೆ ಇರಬೇಕಾಗಿದ್ದ ಮೂಲ ಉದ್ದೇಶವನ್ನೇ ಕಳೆದುಕೊಂಡಿದೆ. ಇದರಿಂದ ವಿಜಯೇಂದ್ರ ಅವರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ವಿಜಯೇಂದ್ರ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ