ಪ್ರಗತಿವಾಹಿನಿ ಸುದ್ದಿ: ಪ್ರತಿಭಾವಂತ ವಿದ್ಯಾರ್ಥಿಗಳ ಕೇಂದ್ರ ಬೆಂಗಳೂರಿನ ಐಐಎಸ್ ಸಿ ಕ್ಯಾಂಪಸ್ ನಿಂದ ವಿದ್ಯಾರ್ಥಿಯೋರ್ವ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಯಶವಂತಪುರ ಬಳಿ ಇರುವ ಐಐಅ ಎಸ್ ಸಿ ಕ್ಯಾಂಪಸ್ ನಿಂದ ವಿದ್ಯಾರ್ಥಿ ಏಕಾಏಕಿ ನಾಪತ್ತೆಯಾಗಿದ್ದಾನೆ. ಡಿ.16ರಂದು ವಿದ್ಯಾರ್ಥಿ ಕ್ಯಾಂಪಸ್ ನಲ್ಲಿ ಹೋಗುತ್ತಿದ್ದ ದ್ರುಶ್ಯ ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ. ಅದಾದ ಬಳಿಕ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಆತ ಎಲ್ಲಿದ್ದಾನೆ ಎಂಬುದೂ ತಿಳಿಯುತ್ತಿಲ್ಲ.
ಅನ್ಮೋಲ್ ಗಿಲ್ ನಾಪತ್ತೆಯಾಗಿರುವ ವಿದ್ಯಾರ್ಥಿ. ಐಐಎಸ್ ಸಿಯಲ್ಲಿ ಎಂ.ಟೆಕ್ ವ್ಯಾಸಂಗ ಮಾಡುತ್ತಿದ್ದ. ಯಶವಂತಪುರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಪೊಲೀಸರು ವಿದ್ಯಾರ್ಥಿಗಾಗಿ ಹುಡುಕಾಟ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ