ಪ್ರಗತಿವಾಹಿನಿ ಸುದ್ದಿ: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಹೆಸರು ಹೇಳಿ ಚಿನ್ನದಂಗಡಿ ಮಾಲಕಿಗೆ ವಮ್ಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ಧರ್ಮೇಂದ್ರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿ ಐಶ್ವರ್ಯಾ ಗೌಡ ಎಂಬ ಮಹಿಳೆ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ನ ಮಾಲಕಿ ವನಿತಾ ಐತಾಳ್ ಎಂಬುವವರಿಗೆ 9 ಕೋಟಿ 82 ಲಕ್ಷ ವಂಚಿಸಿದ ಪ್ರಕರಣದಲ್ಲಿ ಇದೀಗ ನಟ ಧರ್ಮೇಂದ್ರ ಹೆಸರು ಕೇಳಿಬಂದಿದೆ.
ಆರ್.ಆರ್.ನಗರ ನಿವಾಸಿ ಐಶ್ವರ್ಯ ಗೌಡ ಮೂಲಕವೇ ನಟ ಧರ್ಮೇಂದ್ರ ವನಿತಾ ಐತಾಳ್ ಅವರ ಚಿನ್ನದಂಗಡಿಯಲ್ಲಿ ಚಿನ್ನ ಖರೀದಿಸಿದ್ದರು. ಈ ವೇಳೆ ಹಣ ನೀಡದೇ ಕಾಲಾವಕಾಶ ಕೇಳಿದ್ದರು. ಬಳಿಕ ಹಣ ಪಾವತಿಸಿರದ ಬಗ್ಗೆ ಕೇಳಿದಾಗ ಧರ್ಮೇಂದ್ರ, ಡಿ.ಕೆ.ಸುರೇಶ್ ವಾಯ್ಸ್ ನಲ್ಲಿ ತಾನು ಡಿ.ಕೆ.ಸುರೇಶ್ ಎಂದು ಕರೆ ಮಡಿ ಬೆದರಿಕೆ ಹಾಕಿ, ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ.
ಇದೀಗ ನಟ ಧರ್ಮೇಂದ್ರ, ಐಶ್ವರ್ಯ ಗೌಡ, ಆಕೆಯ ಪತಿ ಹರೀಶ್ ಗೌಡ ಸೇರಿದಂತೆ ಮೂವರ ವಿರುದ್ಧ ವನಿತಾ ಐತಾಳ್ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ನಟ ಧರ್ಮೇಂದ್ರ ತಾನು ವನಿತಾ ಐತಾಳ್ ಅವರ ಜ್ಯುವೆಲ್ಲರಿ ಶಾಪ್ ನಲ್ಲಿ ಐಶ್ವರ್ಯಾ ಅವರ ಪರಿಚಯದ ಮೇರೆಗೆ 9 ಲಕ್ಷದಷ್ಟು ಮೌಲ್ಯದ ಚಿನ್ನ ಖರೀದಿಸಿದ್ದು ನಿಜ. ಅಂದು ಹಣ ಪಾವತಿಗೆ ಸ್ವಲ್ಪ ಟೈಂ ಕೇಳಿದ್ದೆ. ಅಶ್ವರ್ಯ ಅದು ತನ್ನದೇ ಚಿನ್ನದಂಗಡಿ ಎಂದು ಹೇಳಿದ್ದರು. ಆದರೀಗ ಅದು ಅವರ ಅಂಗಡಿಯಲ್ಲ, ವನಿತಾ ಐತಾಳ್ ಅವರ ಚಿನದಂಗಡಿ ಎಂಬುದು ಗೊತ್ತಾಗಿದೆ. ನಾನು ಕೆಲ ಸಮಯದ ಬಳಿಕ ಐಶ್ವರ್ಯಾ ಅವರಿಗೆ ಕ್ಯಾಶ್ ಮೂಲಕ ಹಣ ನೀಡಿದ್ದೆ. ಅವರು ವನಿತಾ ಅವರಿಗೆ ಪೇ ಮಾಡಿದ್ದಾಗಿ ಹೇಳಿದ್ದರು. ಅವರಿಬ್ಬರ ವ್ಯವಹಾರ ಏನಿದೆ ಎಂಬುದೂ ನನಗೆ ಗೊತ್ತಿಲ್ಲ. ಈಗ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ