Belagavi NewsBelgaum NewsKarnataka News

*ದೇಹದಾನ : ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಜೀವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆನೆಗೋಳದ ನಿವಾಸಿ ಜಯಂತ ಸದಾಶಿವ ಕಾಣವಿಂದೆ (80) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 80 ವರ್ಷದ ಜಯಂತ ಸಾದಾಶಿವ ಅವರು ಡಿ.25ರಂದು ವಿಧಿವಶರಾಗಿದ್ದರು. ತಮ್ಮ ಕೊನೆಯಾಸೆಯಂತೆ ದೇಹದಾನ ಮಾಡಿದ್ದಾರೆ.

ಮೃತರ ಅಂತಿಮ ಇಚ್ಛೆಯಂತೆ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಬೈಲಹೊಂಗಲ ಮುಖಾಂತರ ಬೆಳಗಾವಿ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನವಾಗಿ ನೀಡಿ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.

ಟ್ರಸ್ಟಿನ ಕಾರ್ಯದರ್ಶಿ ಡಾ.ಮಹಾಂತೇಶ ರಾಮಣ್ಣವರ ದೇಹದಾನ ಮಾಡಿದ ಕಾಣವಿಂದೆ ಕುಟುಂಬದವರಿಗೆ ಕೃತಜ್ಞತೆ ತಿಳಿಸಿದ್ದಾರೆ. ಮೃತರಿಗೆ ಇಬ್ಬರು ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button