ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸುರೇಶ ಅಂಗಡಿ ಕಂದ್ರ ರೈಲ್ವೆ ಸಚಿವರಾಗುತ್ತಿದ್ದಂತೆ ಆರಂಭಿಸಿರುವ ಬೆಳಗಾವಿ -ಬೆಂಗಳೂರು ಸುಪರ್ ಫಾಸ್ಟ್ ರೈಲಿಗೆ ದೀಪಾವಳಿ ನಿಮಿತ್ತ ಹೆಚ್ಚುವರಿ ಬೋಗಿಗಳು ಜೋಡಣೆಯಾಗಲಿವೆ.
06525/06526 -ಬೆಳಗಾವಿ-ಬೆಂಗಳೂರು ತತ್ಕಾಲ ಸುಪರ್ಫಾಸ್ಟ್ ಸ್ಪೆಷಲ್ ರೈಲಿಗೆ ತಲಾ ಒಂದು 3 AC ಮತ್ತು ಸ್ಲೀಪರ್ ಹೆಚ್ಚುವರಿ ಕೋಚುಗಳು ಜೋಡಣೆಯಾಗಲಿದೆ.
ಬೆಂಗಳೂರಿನಿಂದ ಬೆಳಗಾವಿಗೆ ಹೊರಡುವ ದಿಶೆಯಲ್ಲಿ ಇಂದು ಅಂದರೆ 26.10.19ರಂದು ಹೊರಡುವ ರೈಲುಗಾಡಿಗೆ 30.10.19ರವರೆಗೆ ಹೆಚ್ಚುವರಿ ಕೋಚುಗಳು ಅಳವಡಿಸಲಾಗುತ್ತಿದ್ದು, ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುವ ಗಾಡಿಗೆ 27.10.19ರಿಂದ 31.10.19ರವರೆಗೆ ಹೆಚ್ಚುವರಿ ಡಬ್ಬಿಗಳನ್ನು ಅಳವಡಿಸಲು ಅನುಮೋದನೆ ದೊರೆತಿದೆ.
ಇದರಿಂದ ದೀಪಾವಳಿ ಹಬ್ಬಕ್ಕೆ ಪ್ರಯಾಣಿಸುವ ರೈಲುಯಾತ್ರಿಗಳಿಗೆ ಅನುಕೂಲವಾಗಲಿದ್ದು, ಇದರ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಗೊಳಿಸಿಕೊಳ್ಳಬೇಕೆಂದು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಸಾರ್ವಜನಿಕರಲ್ಲಿ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ