Belagavi NewsBelgaum NewsKannada NewsKarnataka NewsNational
*ಹೊಸ ವರ್ಷ ಆಚರಣೆಗೆ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ: ಎಸ್ಪಿ ಅಮರನಾಥ ರಡ್ಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೊಸ ವರ್ಷ ಆಚರಣೆಗೆ ಜಿಲ್ಲೆಯಾದ್ಯಂತ 5 ಕೆಎಸ್‌ಆರ್ ಪಿ ತುಕಡಿ, 10 ಡಿಆರ್ ತುಕಡಿ, 45 ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಯಾವುದೆ ರೀತಿಯ ಅವಘಡ ಜರುಗದಂತೆ ತಡೆಯಲು ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಪ್ರಭಾರ ಎಸ್ಪಿ ಅಮರನಾಥ್ ರೆಡ್ಡಿ ಹೇಳಿದರು.
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕುಡಿದು ವಾಹನ ಚಲಾವಣೆ, ಗಲಾಟೆ ಮಾಡುವ ಕಿಡಿಗೇಡಿಗಳ ವಿರುದ್ಧ ಮುಲ್ಲಾಜಿಲ್ಲದೆ ಕ್ರಮಕ ಜರುಗಿಸಲಾಗುವುದು
ಬೆಳಗಾವಿ ಜಿಲ್ಲೆಯಾದ್ಯಂತ ಪ್ರವಾಸಿ ತಾಣಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಕುಡಿದು ಗಲಾಟೆ ಮಾಡುವುದಾಗಲಿ, ಬೈಕ್ ನಲ್ಲಿ ಮೂರ್ನಾಲ್ಕು ಜನ ತೆರಳುವುದಾಗಲಿ ಮಾಡಬಾರದು ಎಂದರು
ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿರಬೇಕು. ಸ್ವಿಮಿಂಗ್ ಫೂಲ್ ಇದ್ದರೆ ಅಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.