Belagavi NewsBelgaum NewsKarnataka News

*ಡ್ಯೂಟಿ ಬದಲಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ ಪೇದೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡ್ಯೂಟಿ ಬದಲಿಸಿದ್ದಕ್ಕೆ ಪೊಲೀಸ್ ಕಾನ್ಸ್​ಟೇಬಲ್ ಮುದಕಪ್ಪ ಉದಗಟ್ಟಿ ಎಂಬವರು ಆತ್ಮಹತ್ಯೆಯ ನಾಟಕ ಮಾಡಿದ ವಿಚಿತ್ರ ಘಟನೆ ಬೆಳಗಾವಿಯ ಉದ್ಯಮಬಾಗ ಠಾಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ. 

ಮುದಕಪ್ಪ ಅವಾಂತರದಿಂದಾಗಿ ಠಾಣೆಯ ಪಿಐ ಡಿಕೆ ಪಾಟೀಲ್ ಲೋ ಬಿಪಿಯಿಂದ ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಘಟನೆ ಬಗ್ಗೆ ಇದೀಗ ಬೆಳಗಾವಿ ಪೊಲೀಸ್ ಆಯುಕ್ತ ಯುಡಾ ಮಾರ್ಟಿನ್ ಅವರಿಗೂ ಮಾಹಿತಿ ನೀಡಲಾಗಿದೆ. ಮುದಕಪ್ಪ ಎರಡು ದಿನ ರಜೆ ಹೋಗಿ ಬಂದಿದ್ದರು. ಹೀಗಾಗಿ ಅವರಿಗೆ ಪಿಐ ಡ್ಯೂಟಿ ಬದಲಿಸಿದ್ದರು. ಕರ್ತವ್ಯ ನಿಯೋಜಿಸಿದ ಜಾಗಕ್ಕೆ ಹೋಗಬೇಕೆಂದು ಸೂಚನೆ ನೀಡಿದ್ದರು. ಆದರೆ ಇದಕೊಪ್ಪದ ಮುದಕಪ್ಪ, ವಿಷ ಸೇವಿಸುತ್ತೇನೆ ಎಂದು ಹೇಳಿದ್ದಲ್ಲದೆ ಬಿದ್ದು ಹೊರಳಾಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಯಲಾಗಿದ್ದು ಆರೋಗ್ಯ ತಪಾಸಣೆ ಮಾಡಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು, ಮುದಕಪ್ಪ ವಿಷ ಸೇವಿಸಿಲ್ಲ ಎಂದು ದೃಢಪಡಿಸಿದ್ದಾರೆ. ಬಳಿಕ ಮೇಲಧಿಕಾರಿಗಳು ಬುದ್ಧಿವಾದ ಹೇಳಿ ಮುದಕಪ್ಪನನ್ನು ಕಳುಹಿಸಿದ್ದಾರೆ.

Home add -Advt

Related Articles

Back to top button