Kannada NewsKarnataka NewsLatest

ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ -ಎಚ್.ಡಿ.ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ, ಮಾಂಜರಿ -ಕಳೆದ ಆಗಷ್ಟ್ ತಿಂಗಳಿನಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಉಂಟಾಗಿರುವ ಭಾರಿ ಪ್ರವಾಹದಿಂದ   ಜನರು ಬೀದಿಗೆ ಬಂದಿದ್ದಾರೆ. ತಮ್ಮ ಮನೆ, ಬೆಳೆ ಹಾಗೂ ಇನ್ನಿತರ ಬೆಲೆಬಾಳುವ ಸಾಹಿತ್ಯಗಳು ನದಿ ಪಾಲಾಗಿದೆ. ಪ್ರವಾಹ ಪೀಡಿತ ಜನರ ಬದುಕು ಅತಂತ್ರವಾಗಿದ್ದು ಈ ಜನರ ಶಾಶ್ವತ ಪರಿಹಾರಕ್ಕಾಗಿ ರಾಜ್ಯಸರಕಾರವು ಸೂಕ್ತವಾದ ಸ್ಥಳವನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಬೆಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಪ್ರವಾಹ ಪಿಡಿತ ಗ್ರಾಮವಾದ ಮಾಂಜರಿ, ಯಡುರ, ಚಂದೂರ, ಇಂಗಳಿ ಗ್ರಾಮಗಳಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಮಾಂಜರಿ ಗ್ರಾಮ ಪಂಚಾಯತಿಯ ಹತ್ತಿರ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಉದ್ದೇಶಿಸಿ ಮಾತನಾಡುತ್ತಿದ್ದರು.

ಬೆಳಗಾವಿ ಜಿಲ್ಲೆ ಸೆರಿದಂತೆ ಉತ್ತರ ಕರ್ನಾಟಕ ಭಾಗದ ೧೩ ಜಿಲ್ಲೆಗಳಲ್ಲಿ ಪ್ರವಾಹ, ಮಳೆಯಿಂದ ಜನರು ಮನೆ, ಜಮೀನು, ಕುಟುಂಬಸ್ಥರನ್ನು ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಈ ವರ್ಷ ದೀಪಾವಳಿ ಆಚರಿಸುವ ಸ್ಥಿತಿ ಜನರಲ್ಲಿ ಇಲ್ಲ, ಬದುಕು ಏನಾಗಿದೆ ಸರ್ಕಾರ ಯಾವ ರೀತಿ ಪರಿಹಾರ ಕೊಟ್ಟಿದೆ ಎಂದು ನೋಡಿ ಸಂತ್ರಸ್ತರ ಜತೆ ಹಬ್ಬ ಆಚರಿಸಲು ಬಂದಿದ್ದೇನೆ ಎಂದು ಮಾಜಿ ಸಿ.ಎಂ. ಕುಮಾರಸ್ವಾಮಿ ಅವರು ಹೇಳಿದರು.

ಈ ವರ್ಷ ಆದ ಪ್ರವಾಹ ಅನಾಹುತದಿಂದ ಜನರಿಗೆ ಹೊಸ ಜೀವನ ಕಟ್ಟಕೊಳ್ಳಲು ೨-೩ ವರ್ಷವಾದರೂ ಬೇಕು. ೪೦ ಸಾವಿರ ಕುಟುಂಬ ಮನೆ ಕಳೆದುಕೊಂಡಿವೆ. ರಾಮದುರ್ಗ, ಬೆಳಗಾವಿ ನಗರದ ನೇಕಾರರ ಬದುಕು ಹಾಳಾಗಿದೆ. ಪರಿಹಾರಕ್ಕಾಗಿ ಸರ್ಕಾರ ಜಿಲ್ಲಾಧಿಕಾರಿ ಖಾತೆಗೆ ರೂ. ೮೦೦ ಕೋಟಿ ನೀಡಲಾಗಿದ್ದು ಈಗಾಗಲೇ ಪರಿಹಾರ ಕಾರ್ಯಕ್ಕೆ ಕೆಲವು ಹಣವನ್ನು ವೆಚ್ಚಮಾಡಿದ್ದಾರೆ. ನಾನೇ ಮುಖ್ಯಮಂತ್ರಿಯಾಗಿದ್ದರೂ ಒಂದೆರಡು ತಿಂಗಳಲ್ಲಿ ಪುನಃ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರಕ್ಕೆ ಸಮಯ ಕೊಡಬೇಕು ಎಂದರು.

ಈ ವೇಳೆ ಕುಮಾರಸ್ವಾಮಿ ಇವರು ಮಾಂಜರಿ ಗ್ರಾಮದ ದಲಿತ ಕಾಲನಿಯಲ್ಲಿ ಪ್ರವಾಹದಿಂದ ಬಿದ್ದ ಮನೆಗಳನ್ನು ಪರಿಶೀಲಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆಣ್ಣವರ, ಎನ್.ಎಚ್. ಕೋನರೆಡ್ಡಿ, ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ, ಎಮ್.ಕೆ.ಪಾಟೀಲ, ಸಾತಗೌಡಾ ಪಾಟೀಲ, ಶೀತಲ ಮಗೆಣ್ಣವರ ಹಾಗೂ ನೂರಾರು ಗ್ರಾಮಸ್ಥರು ಹಾಜರಿದ್ದರು

ಕಾಂಗ್ರೆಸ್ ಹಗಲು ಗನಸು
ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರದ ಆಸೆಗಾಗಿ ಪಾದಯಾತ್ರೆ ನಡೆಸಲು ಸಜ್ಜಾಗುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಕೋಟಿ, ಕೋಟಿ ಹಣ ಬಾಕಿ ಉಳಿಸಿದ್ದರು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button