Belagavi NewsBelgaum NewsGamesKannada NewsKarnataka NewsNationalSports

*ಮಹಾರಾಷ್ಟ್ರವನ್ನು ಪ್ರತಿನಿಧಿಸಿ ಪದಕ ಗೆದ್ದ ಕರ್ನಾಟಕದ ಯುವಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2024-2025ನೇ  ಸಾಲಿನಲ್ಲಿ ಜಾರ್ಖಂಢ್ ನ ರಾಂಚಿಯಲ್ಲಿ ಜರುಗಿದ 68ನೇ ನ್ಯಾಷನಲ್ ಸ್ಕೂಲ್ ಗೇಮ್ ನಲ್ಲಿ ಕರ್ನಾಟಕ ಮೂಲದ ಬೆಳಗಾವಿ ಜಿಲ್ಲೆಯ ಬಡಚಿ ಗ್ರಾಮದ ಯುವಕ ಅಭಿಂದನ ದೀಪಕ ಸೂರ್ಯವಂಶಿ 3 ಕಿಲೋ ಮೀಟರ್ ಓಟದ ಸ್ಪರ್ಧೆಯಲ್ಲಿ 2ನೇ ಸ್ಥಾನ ಗಳಿಸಿ ರಜತ ಪದಕ ಹಾಗೂ 6 ಕಿಲೋ ಮೀಟರ್ ಕ್ರಾಸ್ ಕಂಟ್ರಿ 3ನೇ ಸ್ಥಾನ ಗಳಿಸಿ ಕಂಚಿನ ಮೂಲಕ ಸಾಧನೆ ಮಾಡಿದ್ದಾನೆ.

ಯುವಕ ಮಹಾರಾಷ್ಟ್ರದಲ್ಲಿ ವ್ಯಾಸಂಗ ಮಾಡುತ್ತಿದ್ದು ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದರೂ ಕೂಡ ಅವನ ತಂದೆ ತಾಯಿಗಳು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ವಾಸವಾಗಿದ್ದು ಮಹಾರಾಷ್ಟ್ರವನ್ನು ಪ್ರತಿನಿಧಿಸಿ ಬಹುಮಾನ ವಿಜೇತನಾದ ಅಭಿನಂದನ ದೀಪಕ ಸೂರ್ಯವಂಶಿಯ  ಈ ಸಾಧನೆಗೆ ಅವನ ಕುಟುಂಬದ ಹಾಗೂ ಬಡಚಿ ಗ್ರಾಮಸ್ಥರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button