Kannada NewsKarnataka NewsLatest

ಸೇನೆ ಸೇರಲು ಬಂದರು; ರಸ್ತೆ, ಪುಟ್ ಪಾತ್ ಮೇಲೆ ಮಲಗಿದರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿಗೊಂದು ಬಂದ ನಿರುದ್ಯೋಗಿ ಯುವಕರು ಎಲ್ಲೆಂದರಲ್ಲಿ ರಸ್ತೆ, ಪುಟ್ ಪಾತ್ ಮೇಲೆ ಮಲಗಿದ್ದಾರೆ.

ಅ.30ರಿಂದ ನ.9ರ ವರೆಗೆ ಬೆಳಗಾವಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿದೆ. ಬೆಳಗಿನಜಾವವೇ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗುವುದರಿಂದ ಸಹಸ್ರಾರು ಯುವಕರು ರಾತ್ರಿಯೇ ಬೆಳಗಾವಿಗೆ ಆಗಮಿಸಿದ್ದಾರೆ. ಅವರೆಲ್ಲ ಕ್ಯಾಂಪ್ ಏರಿಯಾಕ್ಕೆ ಬಂದಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಮಲಗಿದ್ದಾರೆ.

ಬರುವಾಗ ತಂದ ಆಹಾರ ಸೇವಿಸಿ, ನೀರು ಕುಡಿದ ಯುವಕರು, ಪುಟ್ ಪಾತ್ ಮೇಲೆ ಮಲಗಿಕೊಂಡಿದ್ದಾರೆ. ರಾತ್ರಿ 9 ಗಂಟೆಯ ಹೊತ್ತಿಗೆ ಕ್ಯಾಂಪ್ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ಮಲಗಿರುವ ದೃಶ್ಯ ಮನಕರಗುವಂತಿತ್ತು.

ಪ್ರತಿ ಬಾರಿ ರ್ಯಾಲಿ ಸಹಸ್ರಾರು ಜನರು ಬರುವುದು ಗೊತ್ತಿರುವುದರಿಂದ ಅವರಿಗೆ ಮಲಗುವುದಕ್ಕೆ ಸರಿಯಾದ ವ್ಯವಸ್ಥೆ ಮಾಡುವ ಕನಿಷ್ಠ ಸೌಜನ್ಯವನ್ನಾದರೂ ಮಿಲ್ಟ್ರಿ ಅಧಿಕಾರಿಗಳು ಮಾಡಬೇಕಿತ್ತು. ಅತ್ಯಂತ ಬಡತನದಿಂದ ಬರುವ ಯುವಕರು, ಹೇಗಾದರೂ ಮಾಡಿ ದೇಶ ಕಾಯುವ ಸೈನಿಕರಾಗಬೇಕೆಂದು ಬರುತ್ತಾರೆ. ಆದರೆ ಅವರನ್ನು ಸರಿಯಾಗಿ ನೋಡಿಕೊಳ್ಳುವ ಕೆಲಸವನ್ನೂ ಮಾಡದಿರುವುದು ವಿಪರ್ಯಾಸವೇ ಸರಿ.

 

ಸಾವಿರಾರು ಯುವಕರು ಪುಟ್ಪಾತ್ ಮೇಲೆ ಮಲಗಿರುವುದನ್ನು ನಾನೂ ನೋಡಿ ಬಂದೆ. ಆದರೆ ಈ ಸಂದರ್ಭದಲ್ಲಿ ಅಷ್ಟೊಂದು ಜನರಿಗೆ ಒಮ್ಮೆಲೆ ವ್ಯವಸ್ಥೆ ಮಾಡುವುದು ಕಷ್ಟ. ನಾಳೆ ಮಿಲ್ಟ್ರಿ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಸರಿಯಾದ ವ್ಯವಸ್ಥೆ ಮಾಡಲು ಸೂಚಿಸುತ್ತೇನೆ.

-ಸುರೇಶ ಅಂಗಡಿ,

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button