ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯು.ಪಿ.ಎಸ್.ಸಿ ಹುದ್ದೆಗಳಿಗೆ ತರಬೇತಿಗಾಗಿ ಅಭ್ಯರ್ಥಿಗಳ ಆಯ್ಕೆ ಹಿನ್ನೆಲೆಯಲ್ಲಿ ಬೆಳಾಗಾವಿಯ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಕರ್ನಾಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಜರುಗಲಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯಿಂದ ಯು.ಪಿ.ಎಸ್.ಸಿ. ಹುದ್ದೆಗಳಿಗೆ ತರಬೇತಿ ನೀಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು 12-01- 2025 ರಂದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಪರೀಕ್ಷೆಗಳು ನಿಷ್ಪಕ್ಷಪಾತವಾಗಿ ಹಾಗೂ ಯಾವುದೇ ಅಡೆತಡೆಗಳಿಲ್ಲದೇ ನಡೆಯುವಂತೆ ನೋಡಿಕೊಳ್ಳಲು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಲೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ದಿನಾಂಕ:12-01-2025 ರಂದು ಮಧ್ಯಾಹ್ನ 100 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಸಾರ್ವಜನಿಕರು, ಗುಂಪು ಗುಂಪಾಗಿ ಸೇರುವುದನ್ನು ನಿಷೇಧಿಸಿ ಬೆಳಗಾವಿ ನಗರ ಪೋಲಿಸ ಆಯುಕ್ತರು ನಿಷೇದಾಜ್ಞೆಯನ್ನು ಹೊರಡಿಸಿರುತ್ತಾರೆ.
ಪರೀಕ್ಷಾ ಕೇಂದ್ರಗಳ ವಿವರ
ಸರ್ಕಾರಿ ಸರದಾರ್ಸ ಪದವಿ ಪೂರ್ವ ಕಾಲೇಜು, ಮಾರಾಠಾ ಮಂಡಳ ಪದವಿ ಪೂರ್ವ ಕಾಲೇಜು ಚವಾಟ್ ಗಲ್ಲ. ಜ್ಯೋತಿ ಪದವಿ ಪೂರ್ವ ಕಾಲೇಜು, ರಾಣಿ ಪಾರ್ವತಿ ದೇವಿ ಕಾಲೇಜು, ಜಿ.ಎಸ್.ಎಸ್. ಪದವಿ ಪೂರ್ವ ಕಾಲೇಜು, ಬಳಕವಾಡಿ, ಕೆ.ಎಲ್.ಎಸ್. ಗೋಗಟೆ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು, ಟಿಳಕವಾಡಿ, ಸರ್ಕಾರಿ ಚಿಂತಾಮನಿರಾವ ಪದವಿ ಪೂರ್ವ ಕಾಲೇಜು, ಗೋಮಟೇಶ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಬೆನನ್ ಸ್ಮಿತ್ ಪದವಿ ಪೂರ್ವ ಕಾಲೇಜು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ