Latest

ಭಾರೀ ಗಾಳಿ ಮಳೆಗೆ ನೆಲಕಚ್ಚಿದ ದಾಳಿಂಬೆ ಬೆಳೆ, ಲಕ್ಷಾಂತರ ರೂ ನಷ್ಟ

ಪ್ರಗತಿವಾಹಿನಿ ಸುದ್ದಿ,  ಸಾಸಲವಾಡ- ಬಳ್ಳ‍ಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ಸುರಿದ ಭಾರೀ ಮಳೆಗೆ ಹಾಗೂ ಗಾಳಿಯ ರಭಸಕ್ಕೆ ರೈತರು ಬೆಳೆದ ಬೆಳೆ ತುಂಬಾ ಹಾನಿಗೊಳಗಾಗಿದೆ.

ತಾಲೂಕಿನ ಸಾಸವಾಡ ಗ್ರಾಮದ ಎಮ್.ಎಮ್.ಚನ್ನಯ್ಯ ಹಾಗೂ ಎಮ್.ಎಮ್.ಶಂಬು ಎಂಬುವ ವರಿಗೆ ಸೇರಿದ 8ಎಕರೆ ವಿಸ್ತೀಣ೯ದಲ್ಲಿ ಬೆಳೆದಿರುವ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದೆ. ಫಲಭರಿತ ದಾಳಿಂಬೆ ಗಿಡಗಳು ಭಾರೀ ಗಾಳಿ ಮಳೆಗೆ ತುತ್ತಾಗಿ ಭಾಗಶಃ ಹಾನಿಯಾಗಿದೆ. 8ಎಕರೆಯಲ್ಲಿ ಬೆಳೆದು ನಿಂತಿದ್ದ ಫಲಭರಿತ ಸುಮಾರು 10 ಲಕ್ಷರೂ ಬೆಲೆಯಷ್ಟು ಬೆಲೆಯ ದಾಳಿಂಬೆ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕಾರಣ ತಾಲೂಕಾಡಳಿತ ತಮಗಾದ ಹಾನಿಗೆ ಪರಿಹಾರವನ್ನು  ಒದಗಿಸಿಕೊಡಬೇಕೆಂದು ಕೋರಿದ್ದಾರೆ. ಗಾಳಿ ರಭಸಕ್ಕೆ ದಾಳಿಂಬೆ ಫಲವಿರುವ ಗಿಡಗಳು ನೆಲಕ್ಕುರುಳಿದ್ದು, ಕಟಾವಿನ ಹಂತದಲ್ಲಿದ್ದ ಬಹುತೇಕ ದಾಳಿಂಬೆ ಹಣ್ಣುಗಳು  ನೀರಲ್ಲಿ ಕೊಚ್ಚಿಹೋಗಿದೆ. ಇದರಿಂದಾಗಿ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದು, ಸಕಾ೯ರ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಿಕೊಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿರುವುದಾಗಿ ನಷ್ಟಕ್ಕೊಳಗಾದ ರೈತ ಎಮ್.ಎಮ್.ಚನ್ನಯ್ಯ ತಿಳಿಸಿದ್ದಾರೆ.

ಕೂಡ್ಲಿಗಿ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಹಾಗೂ ಗಾಳಿಯ ರಭಸಕ್ಕೆ ತಾಲೂಕಿನ ಬಹುತೇಕ ಕಡೆಗಳಲ್ಲಿ ತೋಟಗಾರಿಕೆ ಬೆಳೆ ಹಾಗೂ ದುಭಾರಿ ಬೆಳೆಗಳು ಹಾನಿಗೊಳಗಾಗಿದ್ದು ರೈತರು ಕಾಂಗಾಲಾಗಿದ್ದಾರೆ. ಕೃಷಿ ಇಲಾಖಾಧಿಕಾರಿಗಳು  ಹಾಗೂ ಕಂದಾಯ ಇಲಾಖಾಧಿಕಾರಿಗಳು ಹಾನಿಗೊಳಗಾದ ಬೆಳೆಗಳಿಗೆ ಪರಿಹಾರವನ್ನು ರೈತರಿಗೆ ಶೀಘ್ರವಾಗಿ ದೊರಕಿಸಿಕೊಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button